ಟಿವಿ ಮುಂದೆ ಗಂಟೆಗಟ್ಲೆ ಕುಳಿತಿದ್ದರೆ ಮಧುಮೇಹ ಗ್ಯಾರಂಟಿ..!

ಟಿವಿ ಮುಂದೆ ಗಂಟೆಗಟ್ಲೆ ಕುಳಿತಿದ್ದರೆ ಮಧುಮೇಹ ಗ್ಯಾರಂಟಿ..!

ಬೆಂಗಳೂರು, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಬೇಸಿಗೆ ರಜಾ ಶುರುವಾಗಿದೆ. ಮಕ್ಕಳು ಟಿವಿ ನೋಡುವ ಸಮಯ ಕೂಡ ಜಾಸ್ತಿಯಾಗಿದೆ. ಕೆಲವೊಂದು ಮಕ್ಕಳು ಬೆಳಿಗ್ಗೆಯಿಂದ ರಾತ್ರಿಯವರೆಗೆ ಟಿವಿ, ಕಂಪ್ಯೂಟರ್, ಸ್ಮಾರ್ಟ್ಪೋನ್ ಅಂತಾ ಅದ್ರಲ್ಲಿಯೇ ಮುಳುಗಿ ಹೋಗ್ತಾರೆ. ಆದ್ರೆ ಮೂರು ತಾಸಿಗಿಂತ ಹೆಚ್ಚು ಸಮಯ ಮಕ್ಕಳು ಇವುಗಳ ಮುಂದೆ ಕುಳಿತುಕೊಳ್ಳೋದು ಒಳ್ಳೆಯದಲ್ಲ. ಮಕ್ಕಳು ಮೂರಕ್ಕಿಂತ ಹೆಚ್ಚು ಗಂಟೆ ಟಿವಿ ಮುಂದೆ ಕುಳಿತಿದ್ದರೆ ಮಧುಮೇಹ ಕಾಡುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ. ಡಿಜಿಟಲ್ ಮಾಧ್ಯಮ ಬೊಜ್ಜಿಗೆ ಕಾರಣವಾಗುತ್ತದೆ. ಹಾಗೆ ಚಯಾಪಚಯದ ಸಮಸ್ಯೆ ಕಾಡುತ್ತದೆ. ಲಂಡನ್ ನಲ್ಲಿ ನಡೆದ ಸಂಶೋಧನೆಯಲ್ಲಿ ಮಕ್ಕಳ ಚಯಾಪಚಯ ಹಾಗೂ ಹೃದಯರಕ್ತನಾಳದ ಬಗ್ಗೆ ಅಧ್ಯಯನ ನಡೆಸಲಾಗಿದೆ. ಇದಕ್ಕೆ 200 ಪ್ರಾಥಮಿಕ ಶಾಲೆಯ 9-10 ವರ್ಷದ 4500 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಲಂಡನ್ ನ ಸೇಂಟ್ ಜಾರ್ಜ್ಸ್ ವಿಶ್ವವಿದ್ಯಾಲಯದ ಪ್ರಕಾರ, ಮೊದಲ ವರ್ಷದಲ್ಲಿಯೇ ಮಕ್ಕಳು ಟಿವಿಯಿಂದ ದೂರವಿದ್ರೆ ಟೈಪ್ 2 ಡಯಾಬಿಟಿಸ್  ಬರುವ ಸಾಧ್ಯತೆ ಕಡಿಮೆ ಇರುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos