ಮಾನವ ಸರಪಳಿ ಹಾಗೂ ಜಾಗೃತಿ ಜಾಥಾಗೆ ಚಾಲನೆ ನೀಡಿದ ತುಷಾರ್ ಗಿರಿ ನಾಥ್

ಮಾನವ ಸರಪಳಿ ಹಾಗೂ ಜಾಗೃತಿ ಜಾಥಾಗೆ ಚಾಲನೆ ನೀಡಿದ ತುಷಾರ್ ಗಿರಿ ನಾಥ್

ಬೆಂಗಳೂರು: ರಾಜ್ಯದಲ್ಲೆಡೆ ಲೋಕಸಭಾ ಚುನಾವಣೆ ಕಣ ಜೋರಾಗಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮತದಾರರು ಹೆಚ್ಚು ಮತ ಮಾಡದೇ ಇರುವ ಕಾರಣ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಅವರು ಮತದಾರರನ್ನು ಸೆಳೆಯಲು ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಲೋಕಸಭಾ ಚುನಾವಣಾ ಹಿನ್ನೆಲೆ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಲಹಂಕ ನ್ಯೂ ಟೌನ್ ನಲ್ಲಿರುವ ಹೊಯ್ಸಳ ಮೈದನಾದಲ್ಲಿ ಏರ್ಪಡಿಸಿದ್ದ ಮಾನವ ಸರಪಳಿ ಹಾಗೂ ಜಾಗೃತಿ ಜಾಥಾಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿ ಈ ಸಂದರ್ಭದಲ್ಲಿ ಮಾತನಾಡಿದರು.

ಯಲಹಂಕ ನ್ಯೂ ಟೌನ್ ನಲ್ಲಿರುವ ಹೊಯ್ಸಳ ಮೈದಾನದಿಂದ ಪ್ರಾರಂಭವಾದ ಕಾಲ್ನಡಿಗೆ ಜಾಥಾ ನ್ಯೂ ಟೌನ್ ಮುಖ್ಯರಸ್ತೆ ಮಾರ್ಗವಾಗಿ 16ನೇ ಬಿ ಕ್ರಾಸ್ ರಸ್ತೆ, ಚಿಕ್ಕಬೊಮ್ಮಸಂದ್ರ ವೃತ್ತ, ಜ್ಞಾನಜ್ಯೋತಿ ವೃತ್ತ, 2ನೇ ಎ ಕ್ರಾಸ್ ರಸ್ತೆ ಮೂಲಕ ಸಾಗಿ ಶೇಷಾದ್ರಿಪುರಂ ಕಾಲೇಜು ಆವರಣದಲ್ಲಿ ಮುಕ್ತಾಯಗೊಂಡಿತು.

ಕಾಲ್ನಡಿಗೆ ಜಾಥಾವು ಡೊಳ್ಳುಕುಣಿತ, ವೀರಗಾಸೆಯ ಜೊತೆಗೆ ಚುನಾವಣಾ ಗೀತೆಯನ್ನು ಹಾಕಿಕೊಂಡು ನಾನಾ ಘೋಷಣೆಗಳನ್ನು ಕೂಗುತ್ತಾ ಸಾಗಿತು. ಜಾಥಾದಲ್ಲಿ ವಿದ್ಯಾಥಿಗಳುಕಾಲ್ನಡಿಗೆಯ ಮೂಲಕ ಸಾಗಿದರೆ, ಅಧಿಕಾರಿ/ಸಿಬ್ಬಂದಿಗಳು ಹಾಗೂ ನಾಗರೀಕರು ದ್ವಿಚಕ್ರಗಳ ಮೂಲಕ ಸಾಗಿದರು.

ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಚುನಾವಣಾ ರಾಯಭಾರಿಯಾದ ನೀತು ವನಜಾಕ್ಷಿ, ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಅಪೂರ್ವ ಕುಲಕರ್ಣಿ, ರಮೇಶ್, 1000ಕ್ಕೂ ವಿದ್ಯಾರ್ಥಿಗಳು, ಅಧಿಕಾರಿ/ಸಿಬ್ಬಂದಿಗಳು, ನಾಗರೀಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos