ಅರಿಶಿನ ಪುಡಿಯ ಹಲವಾರು ಆರೋಗ್ಯ ಲಕ್ಷಣಗಳು!

ಅರಿಶಿನ ಪುಡಿಯ ಹಲವಾರು ಆರೋಗ್ಯ ಲಕ್ಷಣಗಳು!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ನಾವು ದಿನ ನಿತ್ಯ ಬಳಸುವಂತಹ ಪದಾರ್ಥಗಳಲ್ಲಿ ನಮ್ಮ ಆರೋಗ್ಯ ಆಡಗಿದೆ ಆದರೆ ನಾವು ಅದನ್ನು ಯಾವ ರೀತಿ ಬಳಸಬೇಕೆಂದು ಯಾರಿಗೂ ಸಹ ತಿಳಿದಿರುವುದಿಲ್ಲ ಆದ್ದರಿಂದ ನಮ್ಮ ಮನೆಯಲ್ಲಿ ಸಿಗುವಂತಹ ಪದಾರ್ಥಗಳಲ್ಲಿ ನಮ್ಮ ಆರೋಗ್ಯ ಆಡಗಿದೆ ಅದನ್ನು ನಾವು ಸರಿಯಾಗಿ ಬಳಸುವುದರಿಂದ ನಮ್ಮ ಆರೋಗ್ಯ ಸಹ ವೃದ್ಧಿಯಾಗುತ್ತದೆ.

ಅರಿಶಿನದ ಪ್ರಯೋಜನಗಳು ಪ್ರತಿಯೊಬ್ಬರಿಗೂ ತಿಳಿದಿವೆ. ಆದ್ದರಿಂದಲೇ ಇದನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತದೆ. ವಿಶೇಷವಾಗಿ ಭಾರತೀಯರು ಬಹುತೇಕ ಎಲ್ಲಾ ಅಡುಗೆಗೆಗಳಿಗೂ ಅರಿಶಿನವನ್ನು ಸೇರಿಸುತ್ತಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಮುಖಕ್ಕೆ ಪ್ಯಾಕ್‌ ಆಗಿ ಅರಿಶಿನವನ್ನು ಬಳಸುವುದರಿಂದ ಅರಿಶಿನವು ನಮ್ಮ ದೈನಂದಿನ ಜೀವನಶೈಲಿಯಲ್ಲಿ ವಿಶೇಷ ಸ್ಥಾನ ಹೊಂದಿದೆ.

ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅಪ್ಪಟವಾದ ಅರಶಿನ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ ಕುಡಿಯುವುದರಿಂದ ನೆಗಡಿ ಮತ್ತು ಗಂಟಲು ನೋವಿಗೆ ಪರಿಣಾಮಕಾರಿಯಾಗಿದೆ.

ಮಹಿಳೆಯರು ಸ್ನಾನ ಮಾಡುವಾಗ ಕೆನ್ನೆಗೆ ಅರಶಿನದ ಪುಡಿಯನ್ನು ಹಚ್ಚಿ ಕೊಂಡು ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡರೆ ಮುಖದಲ್ಲಿ ಬೇಡದ ಕೂದಲು ಬೆಳೆಯುವುದಿಲ್ಲ ಹಾಗೂ ಮುಖವು ಕಾಂತಿಯುತವಾಗಿರುತ್ತದೆ.

ಅರಶಿನದ ಪುಡಿಯನ್ನು ಹರಳೆಣ್ಣೆಯೊಂದಿಗೆ ಮಿಶ್ರಮಾಡಿ ಶರೀರಕ್ಕೆ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದರೆ ಚರ್ಮದ ಕಾಂತಿ ಹೆಚ್ಚಾಗಿ, ಚರ್ಮರೋಗ ನಿವಾರಣೆಯಾಗುತ್ತದೆ.

ಅರಶಿನದ ಪುಡಿಯನ್ನು ಮೊಸರಿನಲ್ಲಿ ಕದಡಿ ಬೆಳಗಿನ ಹೊತ್ತಿನಲ್ಲಿ ಒಂದು ವಾರಗಳ ಕಾಲ ಸೇವಿಸಿದರೆ ಕಾಮಾಲೆ ರೋಗವು ಕಡಿಮೆಯಾಗುತ್ತದೆ.

ಅರಶಿನ, ಮರದನ, ಮಂಜಿಷವನ್ನು ಹಾಲು, ತುಪ್ಪ ಬೆರೆಸಿ ಅರೆದು ಮೊಡವೆಗಳಿಗೆ ಹಚ್ಚಿಕೊಂಡರೆ ಮೊಡವೆಗಳು ಮಾಯಾವಾಗುತ್ತದೆ.

ಅರಿಶಿನದ ಕೋಡನ್ನು ನಿಂಬೆರಸದಲ್ಲಿ ತೇಯ್ದು ದಿನಕ್ಕೆ ನಾಲ್ಕರಿಂದ ಐದು ಬಾರಿ ಕಾಲಿನಲ್ಲಿರುವ ಆಣಿಗೆ ಲೇಪಿಸಿದರೆ ಉದುರಿ ಹೋಗುತ್ತದೆ.

ಒಣ ಅರಶಿನದ ಕೋಡನ್ನು ಪುಡಿ ಮಾಡಿ ಕೆಂಡದ ಮೇಲೆ ಹಾಕಿ ಅದರ ಹೊಗೆಯನ್ನು ತೆಗೆದುಕೊಳ್ಳುವುದರಿಂದ ನೆಗಡಿ ಯು ಗುಣಮುಖವಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos