ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯಿರಿ

ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯಿರಿ

ಡಿ.22 : ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು ಚಿಟಕಿ ಅರಿಶಿನ ಬೆರೆಸಿ ಕುಡಿಯುವುದರಿಂದ ದುಪ್ಪಟ್ಟು ಲಾಭವಾಗುತ್ತದೆ.ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದ್ದರೆ ಅರಿಶಿನದಲ್ಲಿ ಕರ್ಕ್ಯುಮಿನ್ ಅಂಶವಿರುತ್ತದೆ. ಇವೆರಡೂ ನಮ್ಮ ದೇಹ ಸೇರುವುದರಿಂದ ಸಾಕಷ್ಟು ಲಾಭವಾಗುತ್ತದೆ.
ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ಖಾಯಿಲೆಗೆ ಇದು ಹೇಳಿ ಮಾಡಿಸಿದ ಔಷಧಿ. ಹೃದಯವನ್ನು ಇದು ಆರೋಗ್ಯವಾಗಿರಿಸುತ್ತದೆ.

ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಿ ಮಲಬದ್ಧತೆಯನ್ನು ತಡೆಯುತ್ತದೆ. ಮೂತ್ರ ಸಮಸ್ಯೆಯನ್ನು ಇದು ತಡೆಯುತ್ತದೆ.ದೌರ್ಬಲ್ಯ ಕಡಿಮೆ ಮಾಡಿ ದೇಹಕ್ಕೆ ಶಕ್ತಿ ಹೆಚ್ಚಿಸುತ್ತದೆ. ಮೂತ್ರದ ಸೋಂಕನ್ನು ಕಡಿಮೆ ಮಾಡುತ್ತದೆ. ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿದ್ರೆ ಸಂಧಿ ನೋವು ಕಡಿಮೆಯಾಗುತ್ತದೆ. ಶೀತ, ಕೆಮ್ಮಿಗೆ ಇದು ಅತ್ಯುತ್ತಮ ಮನೆ ಮದ್ದು. ಕೊಬ್ಬನ್ನು ಕಡಿಮೆ ಮಾಡಲು ಇದು ಸಹಕಾರಿ. ಬಾಯಿಯಿಂದ ಬರುವ ದುರ್ವಾಸನೆ ಮತ್ತು ಗುಪ್ತ ರೋಗವನ್ನು ಕಡಿಮೆ ಮಾಡುತ್ತ

ಫ್ರೆಶ್ ನ್ಯೂಸ್

Latest Posts

Featured Videos