ಕಾಮಣ್ಣರನ್ನು ಮಟ್ಟ ಹಾಕಲು ತುಮಕೂರು ಸಿದ್ದ

ಕಾಮಣ್ಣರನ್ನು ಮಟ್ಟ ಹಾಕಲು ತುಮಕೂರು ಸಿದ್ದ

ತುಮಕೂರು, ಜ. 27: ಇತ್ತೀಚಿನ ದಿನಗಳಲ್ಲಿ ಪೋಲಿ ಪುಂಡರ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಮಹಿಳೆಯರು ಹೇಗೆ ತಮ್ಮ ರಕ್ಷಣೆ ಮಾಡಿಕೊಳ‍್ಳಬೇಕು  ಎಂದು ತುಮಕೂರು ನಗರದಲ್ಲಿ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾ.ರೆ

ಹೌದು, ನಗರದಲ್ಲಿ ಹೆಚ್ಚುತ್ತಿರುವ ಬೀದಿ ಕಾಮಣ್ಣಂದಿರನ್ನು ಮಟ್ಟ ಹಾಕಲು ಬರುತ್ತಿದೆ ಮಹಿಳೆಯರ ವಿಶೇಷ ಕಲ್ಪತರು ಪಡೆ. ಶಾಲಾ -ಕಾಲೇಜು , ಬಸ್ ನಿಲ್ದಾಣ, ಪಾರ್ಕ್ಗಳಲ್ಲಿ ಬೀದಿ ಕಾಮಣ್ಣಂದಿರ ಕಾಟ ಹೆಚ್ಚಾಗುತ್ತಿರುವುದನ್ನು ಮನಗಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಲ್ಪತರು ಪಡೆಯನ್ನು ರಚಿಸಿದ್ದಾರೆ. ಪಾರ್ಕ್ಗಳಲ್ಲಿರುವ ಪ್ರೇಮಿಗಳನ್ನು ಕಿಚಾಯಿಸುವ ಹಾಗೂ ಯುವತಿಯರನ್ನು ಚುಡಾಯಿಸುವವರನ್ನು ಈ ಪಡೆ ಮಟ್ಟ ಹಾಕುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮಹಿಳೆಯರ ವಿಶೇಷ ಕಲ್ಪತರು ಪಡೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ಐಜಿಪಿ ಶರತ್ಚಂದ್ರ ಹಸಿರು ನಿಶಾನೆ ನೀಡಿದ್ದಾರೆ.

ಬೀದಿ ಕಾಮಣ್ಣಂದಿರಿಗೆ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಗಿರುವ ಮಹಿಳೆಯರ ವಿಶೇಷ ಕಲ್ಪತರು ಪಡೆ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸಿತು.ಈ ತಂಡವನ್ನು ಜಿಲ್ಲಾಯಾದ್ಯಂತ ವಿಸ್ತರಿಸಿ ಪ್ರತಿ ತಾಲ್ಲೂಕಿನಲ್ಲಿ 15 ಜನ ಮಹಿಳಾ ಸಿಬ್ಬಂದಿಗಳಿರುವ ವಿಶೇಷ ತಂಡವನ್ನು ರಚಿಸಿ ಅದಕ್ಕೆ ಒಬ್ಬರು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos