ತುಳುಸಿ ಸೇವನೆಯಿಂದ ಏನೇನು ಲಾಭ?

ತುಳುಸಿ ಸೇವನೆಯಿಂದ ಏನೇನು ಲಾಭ?

ತುಳಸಿಯನ್ನು ದೊಡ್ಡ ದೊಡ್ಡ ಕಂಪನಿಗಳು ಅವರು ತಯಾರಿಸುವ ಸೋಪ್, ಕ್ರೀಮ್ ಗಳಲ್ಲಿ ಬಳಸುತ್ತಾರೆ. ಅದರಿಂದ ಅಗುವ ಮನೆ ಮದ್ದಿನ ಬಗ್ಗೆ ತಿಳಿದರೆ ಅದನ್ನು ನಮ್ಮ ಮನೆಯಲ್ಲಿ ಹೆಚ್ಚಾಗಿ ಬೆಳೆಸಿ ಉಪಯೋಗಿಸ ಬಹುದು.

ಉಪಯೋಗಗಳು:

ತುಳಸಿ ಗಿಡದ ಕಾಂಡದಿಂದ ಹುಳುಕಡ್ಡಿಯ ಭಾಗವನ್ನು ಚೆನ್ನಾಗಿ ಕೆರೆದು ಅನಂತರ ತುಳಸಿ ಸೊಪ್ಪಿನ ಕಷಾಯ ಮಾಡಿಕೊಂಡು ಅದರಿಂದ ಹುಳುಕಡ್ಡಿಯ ಸ್ಥಾನವನ್ನು ತೊಳೆಯಬೇಕು. ಅದಾದ ನಂತರ ತುಳಸಿ ಸೊಪ್ಪನ್ನು ಚೆನ್ನಾಗಿ ಅರೆದ ಹುಳುಕಡ್ಡಿಯ ಭಾಗಕ್ಕೆ ಲೇಪಿಸುವುದರಿಂದ ಶೀಘ್ರವೇ ಗುಣ ಕಂಡುಬರುವುದು.

ತುಳಸಿ ಗಿಡದ ಹಸಿ ಬೇರಿನಿಂದ ಗಂಧವನ್ನು ತೆಗೆದು ಚೇಳು ಕುಟುಕಿದ ಸ್ಥಾನಕ್ಕೆ ಲೇಪಿಸುವುದರಿಂದ ಚೇಳಿನ ವಿಷ ಇಳಿದು ಹೋಗುವುದು.

ಕಿವಿಯೊಳಗೆ ಹುಣ್ಣಾಗಿದ್ದರೆ ತುಳಸಿ ಎಲೆಯ ರಸವನ್ನು ತೆಗೆದು ಒಂದೆರಡು ತೊಟ್ಟು ರಸವನ್ನು ಕಿವಿಗೆ ಹಾಕುವುದಿಲ್ಲ ಶೀಘ್ರವೇ ಗುಣ ಕಂಡು ಬರುವುದು.

ಕಿವಿಯಲ್ಲಿ ನೋವಿದ್ದರೆ ತುಳಸಿ ಎಲೆಗಳ ರಸವನ್ನು ಕಿವಿಗೆ ಹಿಂಡುತ್ತಿದ್ದರೆ ನೋವು ಮಾಯವಾಗುವುದು.

ನೆಗಡಿ ವಾಸಿಯಾಗಲು ತುಳಸಿ ಸೊಪ್ಪಿನ ಕಷಾಯವನ್ನು ತಯಾರಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಬೇಕು.

ಅತಿಯಾದ ಕೆಮ್ಮು ನಿವಾರಣೆಗೆ ಶ್ರೀತುಳಸಿ ರಸ, ಬೆಳ್ಳುಳ್ಳಿ ರಸ ಹಾಗೂ ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಮಾಡಿಕೊಂಡ ಮೂರು ಗಂಟೆಗಳಿಗೆ ಒಂದು ಸಾರಿ ಒಂದು ಟೀ ಚಮಚದಷ್ಟು ಸೇವಿಸುತ್ತಿದ್ದರೆ ಕೆಮ್ಮು ನಿಂತು ಹೋಗುವುದು.

ಜ್ವರದಿಂದ ಕೂಡಿದ ಕೆಮ್ಮಿಗೆ ತುಳಸಿ ರಸದಲ್ಲಿ ಕಾಳುಮೆಣಸಿನ ಚೂರ್ಣವನ್ನು ಕಲಸಿ ಸೇವಿಸುವುದರಿಂದ ಗುಣ ಕಂಡುಬರುತ್ತದೆ.

ಕಫ ನಿವಾರಣೆಗೆ ತುಳಸಿ ಹೂವುಗಳನ್ನು ಈರುಳ್ಳಿ ರಸ, ಶುಂಠಿ ರಸ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.

ಮಲೇರಿಯಾ ಜ್ವರಕ್ಕೆ ಕೃಷ್ಣ ತುಳಸಿ ಸೊಪ್ಪಿನ ರಸವನ್ನು ತೆಗೆದು ಮೈಗೆ ತಿಕ್ಕಿ ಮಾಲೀಷ್ ಮಾಡುವುದರಿಂದ ಛಳಿ ನಿಲ್ಲುವುದು ಹಾಗೂ ತುಳಸಿ ರಸದೊಂದಿಗೆ ಕಾಳು ಮೆಣಸಿನ ಪುಡಿ ಸೇವಿಸುವುದರಿಂದ ಜ್ವರ ಗುಣವಾಗುವುದು.

ಶ್ರೀತುಳಸಿ ಕಷಾಯವನ್ನು ತಯಾರಿಸಿ ಒಂದು ಟೀ ಚಮಚದಷ್ಟು ರಸವನ್ನು ದಿನಕ್ಕೆ ಮೂರು ಬಾರಿಯಂತೆ ನಾಲ್ಕೈದು ದಿನಗಳ ಕಾಲ ಸೇವಿಸುತ್ತಿದ್ದರೆ ಶ್ವಾಸನಳಿಕಾ ದಾಹ ಗುಣವಾಗುತ್ತದೆ.

ಒಂದು ಟೀ ಚಮಚ ತುಳಸಿ ರಸವನ್ನು ದಿನಕ್ಕೆ ಎರಡು ಬಾರಿಯಂತೆ ಎರಡು ಮೂರು ದಿನಗಳ ಕಾಲ ಸೇವಿಸುವುದರಿಂದ ಅಜೀರ್ಣ ನಿವಾರಣೆಯಾಗುವುದು.

ಶ್ರೀತುಳಸಿ ಸೊಪ್ಪಿನ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಬೆಳಗ್ಗೆ ಎದ್ದಾಗ ಉಂಟಾಗುವ ಅಸ್ವಸ್ಥತೆ ದೂರವಾಗುವುದು.

ತುಳಸಿ ರಸವನ್ನು ಗಂಧದೊಂದಿಗೆ ತೇಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ಉಪಶಮನವಾಗುತ್ತದೆ.

ತುಳಸಿ ರಸವನ್ನು ಜೇನಿನೊಂದಿಗೆ ನಿಯಮಿತವಾಗಿ 6 ತಿಂಗಳು ತೆಗೆದುಕೊಂಡಲ್ಲಿ ಮೂತ್ರದಲ್ಲಿನ ಕಲ್ಲಿನ ಬಾಧೆ ಕಡಿಮೆಯಾಗುತ್ತದೆ.

ತುಳಸಿಯ ಎಲೆಗಳು ನಮ್ಮ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ ಹಾಗೂ ಉದರ ಬಾಧೆಗಳನ್ನು ನಿವಾರಿಸಿ ಶಕ್ತಿ ಕೊಡುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos