ತುಂಬಿ ಹರಿಯುತ್ತಿರುವ ಡೋಣಿ ನದಿ

ತುಂಬಿ ಹರಿಯುತ್ತಿರುವ ಡೋಣಿ ನದಿ

ತಾಳಿಕೋಟೆ, ಸೆ. 27 : ಭಾರೀ ಮಳೆಗೆ ಮೈದುಂಬಿದ ಡೋಣಿ ನದಿ ತುಂಬಿ ಹರಿಯುತ್ತಿದೆ. ಕೆಳಮಟ್ಟದ ಸೇತುವೆ ಜಲಾವೃತಗಿದ್ದು, ವಾಹನಗಳ ಸಂಚಾರ ಪೂರ್ಣ ಸ್ಥಗಿತಗೊಂಡಿವೆ. ಜಿಲ್ಲೆಯ ವಿವಿಧೆಡೆ ಸುರಿದ ಮಳೆಯಿಂದ ಡೋಣಿ ನದಿ ನೀರಿನ ಪ್ರಮಾಣ ಏರಿಕೆ ಯಾಗಿದೆ. ವಿಜಯಪುರ ಜಿಲ್ಲೆಯ ವಿವಿಧಡೆ ಸುರಿದ ಭಾರೀ ಮಳೆಗೆ ಡೋಣಿ ನದಿ ಮೈದುಂಬಿ ಹರಿಯುತ್ತಿದ್ದು, ಹಡಗಿನಾಳ ಗ್ರಾಮದ ಮೂಲಕ ತೆರಳುವ ಡೋಣಿ ನದಿ ಮುಖ್ಯ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾದ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.
ಇಂದರಿಂದಾಗಿ ಪುನರ್ವಸತಿ ಹಡಗಿನಹಾಳ ಗ್ರಾಮ- ಅರನಾಳ, ಕಲದೇವನಹಳ್ಳಿ, ಶಿವಪೂರದಿಂದ ಗ್ರಾಮಸ್ಥರು ಮುದ್ದೇಬಿಹಾಳ, ಬಾಗಲಕೋಟೆ ನಗರಗಳಿಗೆ ಹೋಗುವ ಸಂಪರ್ಕ ರಸ್ತೆ ಇದಾಗಿತ್ತು. ಈಗ ಇದು ಸ್ಥಗಿತವಾಗಿದ್ದರಿಂದ 15 ಕಿಮೀ ಸುತ್ತುವರಿದು ತಮ್ಮ ತಮ್ಮ ಗ್ರಾಮಗಳಿಗೆ ಹಾಗೂ ಗ್ರಾಮಗಳಿಂದ ನಗರಗಳಿಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos