ಕ್ಷಯರೋಗ ಪತ್ತೆ ಆಂದೋಲ

ಕ್ಷಯರೋಗ ಪತ್ತೆ ಆಂದೋಲ

ಕೆ.ಆರ್.ಪುರ, ನ. 28: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ವತಿಯಿಂದ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ನೀಡುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಪೂರ್ವ ತಾಲೂಕು ವೈಧ್ಯಾದಿಕಾರಿ ಡಾ.ಚಂದ್ರಶೇಖರ್ ತಿಳಿಸಿದರು.

ಕೆ.ಆರ್.ಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷಯರೋಗ ಪತ್ತೆಹಚ್ಚಲು ಸಿದ್ದಪಡಿಸಿರುವ ಅರಿವಿನ ಮೊಬೈಲ್ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷಯರೋಗವು ಮೈಕ್ರೋ ಬ್ಯಾಕ್ಟೀರಿಯಂ ಟ್ಯುಬರ್‌ ಕುಲೋಸಿನ್‌ಯೆಂಬ ರೋಗಾಣುವಿನಿಂದ ಹರಡುವ ಒಂದು ಸಾಂಕ್ರಾಮಿಕ ರೋಗ ವಾಗಿದೆ ಎಂದರು.

ಕ್ಷಯರೋಗದಿಂದ ಬಳಲುವ ಒಬ್ಬ ರೋಗಿಯು ಕೆಮ್ಮಿದಾಗ ಮತ್ತು ಸೀನಿದಾಗ ಮತ್ತೊಬ್ಬರಿಗೆ ಗಾಳಿಯ ಮೂಲಕ ಹರಡುಲಿದ್ದು ರೋಗಗ್ರಸ್ತ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 10 ಅಥವಾ ಅದಕ್ಕೂ ಹೆಚ್ಚಿನ ಜನರಿಗೆ ಸೊಂಕು ಉಂಟುಮಾಡಬಹುದು ಎಂದರು.

ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಇದೇ ತಿಂಗಳು 25 ರಿಂದ ಡಿಸೆಂಬರ್‌ 10 ರವರೆಗೆ ಬೆಂಗಳೂರು ನಗರ ಜಿಲ್ಲೆಯ ಪೂರ್ವ ತಾಲೂಕು ವ್ಯಾಪ್ತಿಯಲ್ಲಿನ ಮನೆಮನೆಗೆ ಭೇಟಿ ನೀಡಿ ರೋಗ ಲಕ್ಷಣಗಳು ಇರುವವರನ್ನು ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸಲಾಗುವುದು ಎಂದರು.

ಕ್ಷಯರೋಗದ ವಿರುದ್ಧ ಒಟ್ಟಿಗೆ ಹೋರಾಡಲು ಮತ್ತು ಆರೋಗ್ಯಕರ ಸಮಾಜ ಕಟ್ಟಲು ಒಂದು ಅವಕಾಶ, ರಾಜ್ಯವನ್ನು ಟಿ.ಬಿ ಮುಕ್ತ  ರಾಜ್ಯವನ್ನಾಗಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕ್ಷಯರೋಗ ಟಿ.ಬಿ.ಹೆಚ್.ಬಿ ಅಧಿಕಾರಿ ಶ್ವೇತ,  ಶ್ರೀನಿವಾಸ್, ಆಸ್ಪತ್ರೆಯ ಸಿಬ್ಬಂದಿ ರಾಜು, ರಾಜಾರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos