“ನಂಬಿಕೆ ನಕ್ಷೆ”, “ಹೊಸ ಆಸ್ತಿ ತೆರಿಗೆ” ಹಾಗೂ “ಖಾತಾ ವ್ಯವಸ್ಥೆ” ಗೆ ಚಾಲನೆ: ಡಿಸಿಎಂ

“ನಂಬಿಕೆ ನಕ್ಷೆ”, “ಹೊಸ ಆಸ್ತಿ ತೆರಿಗೆ” ಹಾಗೂ “ಖಾತಾ ವ್ಯವಸ್ಥೆ” ಗೆ ಚಾಲನೆ: ಡಿಸಿಎಂ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ವ್ಯವಸ್ಥೆಗಾಗಿ “ನಂಬಿಕೆ ನಕ್ಷೆ”(ನಂಬಿಕೆಯೊಂದಿಗೆ ಪರಿಶೀಲಿಸುವ ವ್ಯವಸ್ಥೆ, “ಹೊಸ ಆಸ್ತಿ ತೆರಿಗೆ ವ್ಯವಸ್ಥೆ” ಹಾಗೂ “ಖಾತಾ ವ್ಯವಸ್ಥೆ”(ನಾಗರೀಕ ಸ್ವಯಂ ಘೋಷಣೆ ಆಧಾರಿತ ತಾತ್ಕಾಲಿಕ ಆಸ್ತಿ ತೆರಿಗೆ ಸಂಖ್ಯೆ ನಿಯೋಜನೆ ಮತ್ತು “ಬಿಬಿಎಂಪಿ ಖಾತಾ” ವಿತರಣೆ ಯೋಜನೆ)ಗೆ ಇಂದು ಚಾಲನೆ ನೀಡಿದರು.

ಸನ್ಮಾನ್ಯ ಉಪಮುಖ್ಯಮಂತ್ರಿಗಳು, ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ ಕೆ ಶಿವಕುಮಾರ್ ರವರು ಇಂದು ವಿಧಾನಸೌಧದ 3ನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ(ಕೊಠಡಿ ಸಂಖ್ಯೆ 334) ಚಾಲನೆ ನೀಡಿದರು.

ಈ ವೇಳೆ ಮಾನ್ಯ ವಸತಿ ಸಚಿವರಾದ ಶ್ರೀ ಬಿ‌.ಝಡ್ ಜಮೀರ್ ಅಹ್ಮದ್ ಖಾನ್, ಬಿಡಿಎ ಅಧ್ಯಕ್ಷರಾದ ಶ್ರೀ ಎನ್.ಎ ಹ್ಯಾರೀಸ್, ಮಾನ್ಯ ಶಾಸಕರಾದ ರಿಜ್ವಾನ್ ಹರ್ಷದ್, ಮಾಜಿ ಶಾಸಕರಾದ ಶ್ರೀ ಮಂಜುನಾಥ್, ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos