ಟ್ರಂಪ್‍ 2 ವರ್ಷಗಳ ಆಡಳಿತದಲ್ಲಿ 8158 ಸುಳ್ಳು ಹೇಳಿದ್ದಾರೆ

ಟ್ರಂಪ್‍ 2 ವರ್ಷಗಳ ಆಡಳಿತದಲ್ಲಿ 8158 ಸುಳ್ಳು ಹೇಳಿದ್ದಾರೆ

ಅಮೆರಿಕದ ‘ದ ವಾಷಿಂಗ್ಟನ್‌ ಪೋಸ್ಟ್‌’ ವರದಿ

ವಾಷಿಂಗ್ಟನ್‌: ಅಮೆರಿಕ ಕಂಡ ಅತ್ಯಂತ ವಿವಾದಿತ ಅಧ್ಯಕ್ಷರೆನಿಸಿಕೊಂಡಿರುವ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಬರೋಬ್ಬರಿ 8158 ಸುಳ್ಳು ಅಥವಾ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವೆಬ್‌ಸೈಟ್‌ವೊಂದನ್ನು ಉಲ್ಲೇಖಿಸಿ ಅಮೆರಿಕದ ‘ದ ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ.

ಅಧ್ಯಕ್ಷರಾದ ಮೊದಲ ವರ್ಷ ಟ್ರಂಪ್‌ ಅವರು ನಿತ್ಯ ಸರಾಸರಿ 5.9 ಸುಳ್ಳು ಅಥವಾ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದರು. ಎರಡನೇ ವರ್ಷ ಈ ಪ್ರಮಾಣ ಸುಮಾರು 3 ಪಟ್ಟು ಏರಿಕೆಯಾಗಿದ್ದು, ಅಂತಹ ಹೇಳಿಕೆಗಳನ್ನು ನಿತ್ಯ ಸರಾಸರಿ 16.5ರಂತೆ ನೀಡಿದ್ದಾರೆ ಎಂದು ‘ಫ್ಯಾಕ್ಟ್ ಚೆಕ​ರ್‍ಸ್’ನ ಮಾಹಿತಿ ಉಲ್ಲೇಖಿಸಿ ಪತ್ರಿಕೆ ತಿಳಿಸಿದೆ. ಭಾನುವಾರವಷ್ಟೇ ಟ್ರಂಪ್‌ ಅವರು ಎರಡು ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos