ಸ್ಕೂಟರ್ ನಲ್ಲಿ ಮನೆಮನೆಗೆ ತೆರಳಿ ಹಾಲು ಮಾರುವ ವಿಶೇಷ ಮಹಿಳಾ ಮೇಯರ್!

ಸ್ಕೂಟರ್ ನಲ್ಲಿ ಮನೆಮನೆಗೆ ತೆರಳಿ ಹಾಲು ಮಾರುವ ವಿಶೇಷ ಮಹಿಳಾ ಮೇಯರ್!

ತ್ರಿಶೂರ್‌: ಕೇರಳದ ತ್ರಿಶೂರ್‌ನ ಹೊಸ ಮೇಯರ್ ಅಜಿತಾ ಕಳೆದ 18 ವರ್ಷಗಳಿಂದ ತಮ್ಮ ಊರಲ್ಲಿ ಸ್ಕೂಟರ್ ಮೂಲಕ ಹಾಲು ಮಾರುತ್ತಿದ್ದರು. ಇದೀಗ ತ್ರಿಶೂರಿನ ಹೊಸ ಮೇಯರ್ ಆಗಿ ನೇಮಕಗೊಂಡ ಅಜಿತಾ ವಿಜಯನ್ ತಮ್ಮ ಹಳೆಯ ವೃತ್ತಿಯನ್ನು ನಿಲ್ಲಿಸಿಲ್ಲ.

ಈಗಲೂ ನುಸುಕಿನ ಬೆಳಕಿನಲ್ಲಿ ತನ್ನ ಸುತ್ತ ಮುತ್ತಲಿನ ಸುಮಾರು ಇನ್ನೂರು ಮನೆಗಳಿಗೆ ಬೆಳಗ್ಗೆದ್ದು ಹಾಲು ನೀಡುತ್ತಾರೆ.  ಮೇಯರ್ ಆಗಿ ನೇಮಕಗೊಂಡ ಅವರು ತನ್ನ ಹಳೆಯ ಈಗಲೂ ತಮ್ಮ ೧೮ ವರ್ಷ ಹಳೆಯ ವೃತ್ತಿಯನ್ನು ನಿಲ್ಲಿಸದಿರುವುದು ವಿಶೇಷತೆಯಾಗಿದೆ.” ಹೀಗೆ ಮಾಡುವುದರಿಂದ ನನಗೆ ಖುಷಿ ಸಿಗುತ್ತದೆ. ಮಾತ್ರವಲ್ಲ, ನೇರವಾಗಿ ಜನರನ್ನು ಸಂಪರ್ಕಿಸಿ ಮಾತನಾಡಲು ಸಾಧ್ಯವಾಗುತ್ತದೆ. ಮೇಯರ್ ಆದ ಬಳಿಕ ನಮ್ಮ ಬಳಿ ಬರುವುದನ್ನು ನಿಲ್ಲಿಸಿದರು ಎಂದು ಜನ ಭಾವಿಸಬಾರದು ಎಂದು ನಾನು ಹಾಲು ಮಾರುವ ಕೆಲಸವನ್ನು ಮುಂದುವರಿಸಿದ್ದೇನೆ ಎಂದು ಅಜಿತಾ ಹೇಳುತ್ತಾರೆ.

ಅಜಿತಾ ಅವರ ಪತಿ ವಿಜಯನ್ ಅವರು ಸಿಪಿಐ (ಎಂ) ನಾಯಕರಾಗಿದ್ದಾರೆ. ೧೯೯೯ ರಿಂದ ಸಿಪಿಐ(ಎಂ) ಸದಸ್ಯೆ ಆಗಿರುವ ಅವರು ೨೦೦೫ ರಲ್ಲಿ ಕೌನ್ಸಿಲರ್ ಆಗಿ ನಂತರ ೨೦೧೦ ರಲ್ಲಿ ಸಿಪಿಐ (ಎಂ) ಸ್ಟಾ÷್ಯಂಡಿಂಗ್ ಸಮಿತಿ ಅಧ್ಯಕ್ಷರಾಗಿದ್ದರು.

ಕಳೆದ ಐದು ವರ್ಷಗಳಿಂದ ಅವರು ಅಂಗನವಾಡಿ ಶಿಕ್ಷಕಿಯಾಗಿದ್ದರಿಂದ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ನಂತರ ಅವರು ಅದರಿಂದ ಹೊರ ಬಂದ ಬಳಿಕ ಇದೀಗ ಮೇಯರ್ ಮಟ್ಟಕ್ಕೆ ಬೆಳೆದಿದ್ದಾರೆ. ಬೆಳಗಿನ ಸಮಯದಲ್ಲಿ ನನ್ನ ವೃತ್ತಿಯನ್ನು ಮಾಡುತ್ತೆÃನೆ. ಉಳಿದ ಸಮಯದಲ್ಲಿ ಜನಸೇವೆ ಮಾಡುತ್ತೆ ನೆ ಎಂದು ಅಜಿತಾ ಹೇಳುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos