ಟ್ರಾವೆಲ್ಸ್ ಬಸ್ ದರ ಡಬ್ಬಲ್

ಟ್ರಾವೆಲ್ಸ್ ಬಸ್  ದರ ಡಬ್ಬಲ್

ಬೆಂಗಳೂರು, ಅ. 14 : ದೀಪಾವಳಿ ಸಮೀಪಿಸುತ್ತಿದ್ದಂತೆ ಖಾಸಗಿ ಟ್ರಾವೆಲ್ಸ್ಗಳು ಪ್ರಯಾಣ ವೆಚ್ಚವನ್ನು ದ್ವಿಗುಣಗೊಳಿಸಿ ಸಾರ್ವಜನಿಕರನ್ನು ಸುಲಿಗೆ ಮಾಡಲು ಆರಂಭಿಸಿರುವು ಆಕ್ರೋಶಕ್ಕೆ ಗುರಿ.
ದೀಪಾವಳಿ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಪ್ರಮುಖ ಹಬ್ಬ. ಬೆಂಗಳೂರಿನಲ್ಲಿರುವ ಬಹುತೇಕ ಮಂದಿ ದೀಪಾವಳಿಗಾಗಿ ಊರಿಗೆ ವಾಪಸ್ ಹೋಗುವುದು ವಾಡಿಕೆ. ಇದರ ಸುಳಿವರಿತ ಖಾಸಗಿ ಟ್ರಾವೆಲ್ಸ್ಗಳು ಬಸ್ ಪ್ರಯಾಣ ದರವನ್ನು ಡಬ್ಬಲ್ ಮಾಡಿ ಸುಲಿಗೆ ಆರಂಭಿಸಿವೆ. ಸಾಮಾನ್ಯವಾಗಿ 500ರಿಂದ 600ರೂ. ಇದ್ದಂತಹ ಸೀಟರ್ನ ಪ್ರಯಾಣ ದರ ಸಾವಿರ ದಾಟಿದೆ. 1500ರೂ. ಇದ್ದ ಸ್ಲೀಪರ್ನ ಪ್ರಯಾಣ ದರ ಎರಡು ಸಾವಿರ ದಾಟಿದೆ. ಇದನ್ನು ಕಂಡು ಪ್ರಯಾಣಿಕರು ಹೈರಾಣಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos