ಕ್ರೀಡಾ ಸಂಕೀರ್ಣ ವನ್ನು ಉದ್ಗಾಟಿಸಿದ ಸಾರಿಗೆ ಸಚಿವರು!

ಕ್ರೀಡಾ ಸಂಕೀರ್ಣ ವನ್ನು ಉದ್ಗಾಟಿಸಿದ ಸಾರಿಗೆ ಸಚಿವರು!

ಬೆಂಗಳೂರು: ಇಂದು ಮಾನ್ಯ ಸಾರಿಗೆ ಮಾತ್ತು ಮುಜರಾಯಿ ಸಚಿವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೇಲ್ದರ್ಜೆಗೇರಿಸಿದ ಮುದ್ರಣಾಲಯ, ಕ್ರೀಡಾ ಸಂಕೀರ್ಣ ವನ್ನು  ಉದ್ಗಾಟಿಸಿದರು ಹಾಗೂ ನೂತ15  ಬೊಲೆರೋ ಜೀಪುಗಳಿಗೆ ಚಾಲನೆ ನೀಡಿದರು.

ನಿಗಮದ ಕ್ರೀಡಾ ಸಂಕೀರ್ಣದ ಮೇಲ್ದರ್ಜೆ ಕಾಮಗಾರಿ:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಕಾರ್ಮಿಕರ ಆರೋಗ್ಯ ನಿರ್ವಹಣೆ, ಒತ್ತಡ ನಿವಾರಣೆಕ್ಕಾಗಿ ಶಾಂತಿನಗರದಲ್ಲಿ ಕ್ರೀಡಾ ಸಂಕೀರ್ಣವನ್ನು ಆರಂಭಿಸಿದ್ದು ಇಲ್ಲಿ ಶೆಟಲ್, ಟೇಬಲ್ ಟೆನ್ನಿಸ್, ಕೇರಂ, ಚೆಸ್ ಇತ್ಯಾದಿ ಕ್ರೀಡೆಗಳ ವ್ಯವಸ್ಥೆ ಮಾಡಲಾಗಿರುತ್ತದೆ.  ಪ್ರಸ್ತುತ ನಿಗಮವು ಈ ಕ್ರೀಡಾ ಸಂಕೀರ್ಣವನ್ನು ರೂ 69.07 ಲಕ್ಷದಲ್ಲಿ ಅಭಿವೃದ್ದಿ ಪಡಿಸಿ ಮೇಲ್ದರ್ಜೆಗೇರಿಸಿದೆ. ಕೈಗೊಂಡಿರುವ ಕಾಮಗಾರಿಗಳ ವಿವರ ಕೆಳಗಿನಂತಿದೆ.

ಕ್ರೀಡಾ ಅಂಕಣದ 2 ಆಟದ ಅಂಕಣಗಳಿಗೆ ನೂತನವಾಗಿ ಮರದ ನೆಲಹಾಸು  ಒದಗಿಸಲಾಗಿದೆ:

ನೆಲಹಾಸು ಕಾಂಕ್ರೀಟು ಒದಗಿಸಿರುವುದು. ಕ್ರೀಡಾ ಸಂಕೀರ್ಣದ ಕಟ್ಟಡದ ಛಾವಣಿ ದುರಸ್ತಿ. ಕಟ್ಟಡ ಮುಂಭಾಗದ ಅಭಿವೃದ್ಧಿ ಕೆಲಸ. ನಿಗಮವು 1952 ರಲ್ಲಿ ಮುದ್ರಣಾಲಯವನ್ನು ಟಿಕೇಟ್‌ಗಳು, ಪಾಸ್‌ಗಳು ಹಾಗೂ  ಲೇಖನ ಸಾಮಗ್ರಿಗಳ ಮುದ್ರಣ ಹಾಗೂ ಸರಬರಾಜು ಕಾರ್ಯಕ್ಕಾಗಿ ಪ್ರಾರಂಭಿಸಲಾಗಿತ್ತು. ಪ್ರಸ್ತುತ ಮುದ್ರಣಾಲಯದಲ್ಲಿ ಟಿಕೆಟ್‌, ಇ.ಟಿ.ಎಂ ರೋಲ್‌ಗಳು ಗಣಕ ಯಂತ್ರ ಲೇಖನ ಸಾಮಾಗ್ರಿ, 176 ಬಗೆಯ ಮುದ್ರಣ ಸಾಮಗ್ರಿಗಳು, ವಾರ್ಷಿಕ ಆಡಳಿತ ಮತ್ತು ಲೆಕ್ಕ ಪತ್ರ ಪುಸ್ತಕಗಳು, ಲೆಟರ್‌ ಹೆಡ್‌, ವಿಸಿಟಿಂಗ್‌ ಕಾರ್ಡ್‌, ಕರ ಪತ್ರಗಳು ಇತ್ಯಾದಿ ಮುದ್ರಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮುದ್ರಣಾಲಯವು ಪ್ರತಿ ವರ್ಷ ರೂ 75 ಲಕ್ಷ ಮೌಲ್ಯದ  ಇ.ಟಿ.ಎಂ ಟಿಕೆಟ್‌ ರೋಲ್‌ಗಳನ್ನು ಮುದ್ರಿಸಿ ವಿಭಾಗಗಳಿಗೆ ಸರಬರಾಜು ಮಾಡುತ್ತಿದೆ. ಮುದ್ರಣಾಲಯವು ಪ್ರತಿ ವರ್ಷ ರೂ.15 ಕೋಟಿಗಳ ವಹಿವಾಟನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಮುದ್ರಣಾಲಯದ ಕಟ್ಟಡದಲ್ಲಿ ಕೆಳಕಂಡ ಕಾಮಗಾರಿಗಳನ್ನು ನಿರ್ವಹಿಸಿ  ರೂ.39.83 ಲಕ್ಷಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ.

ಮುದ್ರಣಾಲಯದ ಮುಖ್ಯ ಕಟ್ಟಡದ ಕಾಂಕ್ರೀಟು ನೆಲಹಾಸು ಒದಗಿಸಲಾಗಿದೆ. ನೈಸರ್ಗಿಕವಾಗಿ ಹೆಚ್ಚುವರಿ ಬೆಳಕು ಬರುವಂತೆ ನೂತನ skypipe ಅಳವಡಿಸಲಾಗಿದೆ.  ಮುದ್ರಣಾಲಯದ ಉಗ್ರಾಣ ಕಟ್ಟಡದಲ್ಲಿ ಆರ್.ಸಿ.ಸಿ. ಕಾಂಕ್ರೀಟ್ ನೆಲಹಾಸು ಒದಗಿಸಲಾಗಿದೆ. ಇತರೆ ದುರಸ್ತಿ ಹಾಗೂ ಬಣ್ಣದ ಕೆಲಸ

15 ಬೊಲೆರೋ ಜೀಪು ಗಳ ಸೇರ್ಪಡೆ:

ನಿಗಮದ ವಿಭಾಗಗಳಲ್ಲಿ ಕಾರ್ಯಚರಣೆಯನ್ನು ಉತ್ತಮಗೊಳಿಸಲು , ಅಪಘಾತ ಪರಿಹಾರ ಸಂದರ್ಭದಲ್ಲಿ ಬಳಕೆಗಾಗಿ, ಮಾರ್ಗ ತನಿಖಾ ಕಾರ್ಯ, ಅವಘಡಗಳ ಸಂಧರ್ಭದಲ್ಲಿ ತುರ್ತು ಬಳಕೆ ಹಾಗೂ ಘಟಕ/ವಿಭಾಗಗಳಲ್ಲಿ ಸುಸೂತ್ರ ಕಾರ್ಯಚರಣೆಗಾಗಿ ಇಂದು 15 ಬೊಲೆರೋ ಜೀಪುಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಕೆ.ಎಸ್.ಆರ್.ಟಿ.ಸಿ ವ್ಯಾಪ್ತಿಯಲ್ಲಿ 83 ಘಟಕಗಳಿದ್ದು, ಈಗಾಗಲೇ 50 ಬೊಲೆರೋ ಜೀಪುಗಳನ್ನು ಒದಗಿಸಲಾಗಿದೆ.

ಸಮಾರಂಭದಲ್ಲಿ ಶ್ರೀ. ವಿ.ಅನ್ಬುಕುಮಾರ್‌, ಭಾ.ಆ.ಸೇ., ವುವಸ್ಥಾಪಕ ನಿರ್ದೇಶಕರು, ಕ ರಾ ರ ಸಾ ನಿಗಮ, ಡಾ. ನಂದೀನಿ ದೇವಿ, ಭಾ.ಆ.ಸೇ, ನಿರ್ದೇಶಕರು, ನಿಗಮದ  ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos