ಆಸ್ಪತ್ರೆಗೆ ಜೀವಂತ ಹೃದಯ ರವಾನೆ

ಆಸ್ಪತ್ರೆಗೆ ಜೀವಂತ ಹೃದಯ ರವಾನೆ

ಬೆಂಗಳೂರು, ಡಿ. 31: ಮೈಸೂರು ಮೂಲದ ರೋಗಿಗೆ ಲಘು ಹೃದಯಾಘಾತವಾಗಿದ್ದು, ಹೃದಯ ಕಸಿ ಮಾಡಲು ಬಿಜಿಎಸ್ ಹೃದಯ ಕೇಂದ್ರದ ವೈದ್ಯರು ನಿರ್ಧರಿಸಿದ್ದರು. ಹೀಗಾಗಿ ರೋಗಿಯ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬಿಜಿಎಸ್ ಹೃದಯ ಕೇಂದ್ರದ ವೈದ್ಯರಾದ ಭಾಸ್ಕರ್ ನೇತೃತ್ವದ ತಂಡ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ.

ಬೆಳಗ್ಗೆ 9:56ಕ್ಕೆ ಹೆಬ್ಬಾಳದ ಸಿಎಂಸಿ ಆಸ್ಪತ್ರೆಯಿಂದ ಹೊರಟ ಅಂಬುಲೆನ್ಸ್ ಮೇಖ್ರಿ ಸರ್ಕಲ್, ಸುಮ್ಮನಹಳ್ಳಿ, ಕೆಂಗೇರಿ ಮಾರ್ಗದ ಮೂಲಕ 10:28ಕ್ಕೆ ಸರಿಯಾಗಿ ಹೃದಯ ಕೇಂದ್ರ ತಲುಪಿತು ಎಂದು ಬಿಜಿಎಸ್ ಹೃದಯ ಕೇಂದ್ರದ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ .

ಹೃದಯ ಸಾಗಿಸಲು ಗ್ರೀನ್ ಕಾರಿಡರ್ ವ್ಯವಸ್ಥೆ ನಿರ್ಮಿಸಲಾಗಿತ್ತು. ಇದರಿಂದ ಸುಮಾರು 36 ಕಿ.ಮೀ ದೂರವನ್ನು 26 ನಿಮಿಷದಲ್ಲಿ ಅಂಬುಲೆನ್ಸ್ ಕ್ರಮಿಸಿದೆ.

 

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos