ರೈಲುಗಳ ಮುಖಾಮುಖಿ ಡಿಕ್ಕಿ

ರೈಲುಗಳ ಮುಖಾಮುಖಿ ಡಿಕ್ಕಿ

ಹೈದರಾಬಾದ್,ನ,11: ಎರಡು ರೈಲುಗಳ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಹೈದರಾಬಾದ್ ನ ಕಾಚಿಗುಡದಲ್ಲಿ ನಡೆದಿದೆ.

ಘಟನೆಯಲ್ಲಿ ಒಂದು ರೈಲಿನ ಚಾಲಕ ಸೇರಿ ಸುಮಾರು 6 ಮಂದಿಗೆ ಗಾಯಗಳಾಗಿದ್ದು ಸಾವನ್ನಪಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡವರನ್ನು ಕೂಡಲೇ ಹತ್ತಿರದ ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಡಿಸ್ಚಾರ್ಜ್ ಮಾಡಲಾಗಿದೆ.

ರೈಲ್ವೆ ಅಧಿಕಾರಿಗಳನ್ನು ಅಪಘಾತದ  ಸ್ಥಳಕ್ಕೆ  ದೌಡಾಯಿಸಿದ್ದು, ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಹೈದರಾಬಾದ್ ನಲ್ಲಿ ರೈಲುಗಳ ಮಧ್ಯೆ ಅಪಘಾತ ಸಂಭವಿಸಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಮೇಲ್ವಿಚಾರಣೆ ಹಾಗೂ ಸಹಾಯಕ್ಕಾಗಿ ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಗಾಯಗೊಂಡವರಿಗೆ ಕೂಡಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos