ಗೀತಾ ಚಿತ್ರದ ಟ್ರೇಲರ್ ರಿಲೀಸ್

ಗೀತಾ ಚಿತ್ರದ ಟ್ರೇಲರ್ ರಿಲೀಸ್

ಬೆಂಗಳೂರು, ಸೆ. 12: ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಎಂದೇ ಖ್ಯಾತಿ ಹೊಂದಿರುವ ನಟ ಗಣೇಶ್. ಹೌದು, ಗೋಲ್ಡನ್ ಸ್ಟಾರ್ ಮತ್ತು ಶಾನ್ವಿ ಶ್ರೀವಾಸ್ತವ್ ಅಭಿನಯದ “ಗೀತಾ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಈಗಾಗಲೇ ಗೀತಾ ಟ್ರೇಲರ್ ಅನ್ನು 3,65, 321 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

ಟ್ರೇಲರ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಂಚಿಂಗ್ ಡೈಲಾಗ್ ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಂಕರ್ ನಾಗ್ ಅವರ ಗೀತಾ ಚಿತ್ರದ ಹಾಡಿನ ಜತೆಗೆ ಈ ಚಿತ್ರವು ಪ್ರೇಮ ಕಥಾಹಂದರವನ್ನು ಹೊಂದಿದ್ದು, ಅಣ್ಣಾವ್ರೇ ಅಖಾಡಕ್ಕಿಳಿದ ಮೇಲೆ ಅಖಾಡ ನಮ್ದೆ ಎನ್ನುವ ಡೈಲಾಗ್ ಗಳು ಭಾರೀ ಜನಪ್ರಿಯವಾಗುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos