ರಸ್ತೆ ಗುಂಡಿಗಳನ್ನು ಮುಚ್ಚಿದ ಟ್ರಾಫಿಕ್ ಪೊಲೀಸರು

ರಸ್ತೆ ಗುಂಡಿಗಳನ್ನು ಮುಚ್ಚಿದ ಟ್ರಾಫಿಕ್ ಪೊಲೀಸರು

ಬೆಂಗಳೂರು, ಮೇ.3, ನ್ಯೂಸ್ ಎಕ್ಸ್ ಪ್ರೆಸ್: ಟ್ರಾಫಿಕ್ ಪೊಲೀಸರೆಂದರೆ ಕೇವಲ ಟ್ರಾಫಿಕ್ ನಿಯಂತ್ರಣ, ಹೆಲ್ಮೆಟ್ ಹಾಕದಿರುವವರನ್ನ ಹಿಡಿದು ಫೈನ್ ಹಾಕುವುದಷ್ಟೇ ಅಲ್ಲ ಸುಗಮ ಸಂಚಾರಕ್ಕೆ ಬೇಕಾಗುವ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ.

ಇನ್ನೇನು ಮಳೆಗಾಲ ಆರಂಭವಾಗುತ್ತಿದೆ, ಹೈಕೋರ್ಟ್ ಹಲವು ಬಾರಿ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡು ಕೆಲದಿನಗಳು ರಸ್ತೆಗುಂಡಿಯನ್ನು ಹಗಲುರಾತ್ರಿ ಎನ್ನದೆ ಮುಚ್ಚಿದರು. ಆದರೆ ಈಗ ನಗರದ ತುಂಬೆಲ್ಲಾ ಮತ್ತೆ ಗುಂಡಿಗಳು ತುಂಬಿ ಹೋಗಿವೆ. ಬಿಬಿಎಂಪಿ ಅದನ್ನು ಸರಿಪಡಿಸುವ ಹಾಗೆ ಕಾಣುತ್ತಿಲ್ಲ ಹಾಗಾಗಿ ಟ್ರಾಫಿಕ್ ಪೊಲೀಸರೇ ಮುಂದಾಗಿದ್ದಾರೆ.

ಸಂಚಾರ ಪೊಲೀಸರು, ಬಾಂಡ್ಲಿ-ಕರಣೆ ಹಿಡಿದು 221 ಗುಂಡಿಗಳನ್ನು ಮುಚ್ಚಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಯಾವ್ಯಾವ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ ಎಂಬುದನ್ನು ಸಂಚಾರ ಪೊಲೀಸರು ಪತ್ತೆ ಮಾಡಿ, ಫೋಟೋ ಹಿಡಿದು ತಮ್ಮ ಮೇಲಧಿಕಾರಿಗಳಿಗೆ ಕಳುಹಿಸಬೇಕು. ಅಲ್ಲದೆ, ಅದನ್ನು ತ್ವರಿತ ಗತಿಯಲ್ಲಿ ದುರಸ್ತಿಗೊಳಿಸಬೇಕು ಎಂಬ ಆದೇಶ ಹೊರಬಿದ್ದಿದೆ.

ಹೀಗಾಗಿ ಈ ಮೊದಲು ಹೆಲ್ಮೆಟ್ ಧರಿಸದಿರುವುದು, ಸಿಗ್ನಲ್ ಜಂಪಿಂಗ್ ನಂತಹ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮೇಲೆ ನಿಗಾ ಇಡುತ್ತಿದ್ದ ಸಂಚಾರ ಪೊಲೀಸರು, ಇನ್ಮುಂದೆ ರಸ್ತೆಗುಂಡಿಗಳ ಮೇಲೂ ಕಣ್ಣಿಡಲಿದ್ದಾರೆ.

ಅಂತಿಮವಾಗಿ ಈ ಪಟ್ಟಿಯನ್ನು ಸಿದ್ಧಪಡಿಸಿ ಸಂಬಂಧಿಸಿದ ಬಿಬಿಎಂಪಿ ಅಧಿಕಾರಿಗಳಿಗೆ ಕಳುಹಿಸಿಕೊಟ್ಟು, ಕೂಡಲೇ ಗುಂಡಿ ಮುಚ್ಚುಲು ಕ್ರಮ ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸರು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos