ಹೆದ್ದಾರಿಯಲ್ಲಿ ಟ್ರಾಫಿಕ್

ಹೆದ್ದಾರಿಯಲ್ಲಿ ಟ್ರಾಫಿಕ್

ನೆಲಮಂಗಲ, ಮೇ .೧೩ : ಕೋವಿಡ್ ೧೯ ಹಿನ್ನಲೆಯಲ್ಲಿ, ಕ್ವಾರಂಟೈನ್ ಸೀಲ್ ನಿಮ್ಮ ಕೈಯಲ್ಲಿ  ಇದ್ರೆ ಆ ವ್ಯಕ್ತಿಯನ್ನು ಲಾಕ್ ಮಾಡಲು ಖಾಕಿ ಕಾರ್ಯಾಚರಣೆ ರೂಪಿಸಿದೆ. ಬೆಂಗಳೂರು ಹೊರವಲಯ ನೆಲಮಂಗಲದ ಮಾದವಾರ ಬಳಿ ಎಲ್ಲಾ ಕಾರುಗಳ ತಪಾಸಣೆ ನಡೆಸುತ್ತಿದ್ದು, ಕೈಯಲ್ಲಿ ಸೀಲ್ ಇದ್ದು ಹೊರಗೆ ಬಂದ್ರೆ ಹುಷಾರ್ ಎನ್ನುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

ಹೊರ ರಾಜ್ಯದ ಕಾರುಗಳ ಮೇಲೆ ಖಾಕಿ ಕಣ್ಗಾವಲು ಮಾಡಿದ್ದು, ಕಾರುಗಳಲ್ಲಿರುವ ಎಲ್ಲಾ ಸವಾರರ ಕೈಗಳು ತಪಾಸಣೆ ನಡೆಸುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದ್ದು, ತುಮಕೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಕಿಲೋಮೀಟರ್ ದೂರ ಟ್ರಾಫಿಕ್ ಜಾಮ್ ಆಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವ ವಾಹನಗಳ ತಪಾಸಣೆ ನಡೆಸಿತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos