ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ

ಬೆಂಗಳೂರು, ಸೆ. 7: ಟ್ರಾಫಿಕ್ ಸಮಸ್ಯೆ ಉಲ್ಬಣಕ್ಕೆ ಮೆಟ್ರೋ ರೈಲು ಮದ್ದು ಎಂಬ ಭಾವನೆ ಮೂಡಿತ್ತು. ಮೆಟ್ರೋದಲ್ಲಿ ನಿತ್ಯವೂ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಬಿಎಂಟಿಸಿ ಬಸ್ಗಳಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆಯೇನೂ ಕಡಿಮೆ ಇಲ್ಲ. ಮೆಟ್ರೋ ಬಂದಾದ ಮೇಲೆ ವಾಹನದಟ್ಟಣೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ.

ಮಿಗಿಲಾಗಿ ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ. ಮೆಟ್ರೋದಲ್ಲಿ ಪ್ರಯಾಣಿಸುವ ಮಂದಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೇಗನೆ ತಲುಪುತ್ತಾರೆ. ಕೆಲವೆಡೆ ಮೆಟ್ರೋ ಸಂಪರ್ಕ ಆರಂಭವಾಗಿಲ್ಲ. ಹಾಗೆಯೇ ಮೆಟ್ರೋ ಲಭ್ಯವಿದ್ದರೂ ಸ್ವಂತ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಕಡಿಮೆಯಾಗಿಲ್ಲ.

ದಶಕಗಳಿಂದ ಇರುವ ಟ್ರಾಫಿಕ್ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸಿಗುವ ಸೂಚನೆಗಳೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಟ್ರಾಫಿಕ್ ಕುರಿತಾದ ಚರ್ಚೆಗಳು ಮನೆ, ಕಚೇರಿ, ಊಟದ ಟೇಬಲ್, ಸಾಮಾಜಿಕ ಜಾಲತಾಣ, ವಾಟ್ಸಾಪ್ ಮುಂತಾದೆಡೆ ನಡೆಯುತ್ತಲೇ ಇರುತ್ತವೆ.

ಟ್ರಾಫಿಕ್ ಸಮಸ್ಯೆಗೆ ಕಾರಣಗಳು ಹಲವು. ಹೆಚ್ಚುತ್ತಿರುವ ಕಾರ್ಗಳ ಸಂಖ್ಯೆ ಮತ್ತು ಅಧಿಕ ಒನ್ ವೇ ಸಂಚಾರ ಮುಖ್ಯವಾದವು. ಪರಿಣಾಮವಾಗಿ ಸಾಫ್ಟ್ವೇರ್ ಉದ್ದಿಮೆ ಒಂದೇ ಸಮನೆ ಬೆಳೆಯತೊಡಗಿತು. ದೇಶದ ಬೇರೆ ಬೇರೆ ರಾಜ್ಯಗಳ ಜನರೂ ಉತ್ತಮ ಅವಕಾಶ ಅರಸಿ ಕಾಲಿಡತೊಡಗಿದರು.

ನಗರದ ಟ್ರಾಫಿಕ್ ವ್ಯವಸ್ಥೆಯ ಸ್ಥಿತಿ ಏಕಾಏಕಿ ಬದಲಾಗತೊಡಗಿತು. ಎಷ್ಟು ವಾಹನಗಳು ನೋಂದಣಿಯಾಗುತ್ತಿದೆ ಗೊತ್ತೇ? ಕರ್ನಾಟಕ ಸಾರಿಗೆ ಇಲಾಖೆಯ ಪ್ರಕಾರ 2019ರ ವೇಳೆಗೆ ನೋಂದಣಿಯಾದ ಸಾರಿಗೆ (ಟ್ರಕ್, ಲಾರಿ ಮತ್ತು ಟ್ಯಾಕ್ಸಿಗಳು) ಹಾಗೂ ಸಾರಿಗೆಯೇತರ (ದ್ವಿಚಕ್ರ ವಾಹನ, ಕಾರುಗಳು, ಓಮ್ನಿ ಬಸ್) ವಾಹನಗಳ ಸಂಖ್ಯೆ 82,53,218. ಇವುಗಳಲ್ಲಿ 15,72,185 ಕಾರುಗಳು ಮತ್ತು 57,30,388 ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ.

ನಾಲ್ಕೂವರೆ ವರ್ಷಗಳಲ್ಲಿ ವಾಹನಗಳ ಸಂಖ್ಯೆ 23 ಲಕ್ಷಕ್ಕೂ ಹೆಚ್ಚಾಗಿದೆ ಎನ್ನುವುದನ್ನು ಅಂಕಿ ಅಂಶಗಳು ತಿಳಿಸುತ್ತವೆ. 2018ರ ಡಿಸೆಂಬರ್ ಅಂತ್ಯಕ್ಕೆ  78,84,998 ವಾಹನಗಳು ನೋಂದಣಿಯಾಗಿದ್ದವು. 2017ರ ಡಿಸೆಂಬರ್ ಅಂತ್ಯಕ್ಕೆ 72,58,889, 2016 ಡಿಸೆಂಬರ್ನಲ್ಲಿ 66,65,980 ಮತ್ತು 2015ರ ಡಿಸೆಂಬರ್ ಅಂತ್ಯಕ್ಕೆ 59,49,816 ವಾಹನಗಳು ನೋಂದಣಿಯಾಗಿದ್ದವು. 2019ರಲ್ಲಿ ನೋಂದಣಿಯಾಗುತ್ತಿರುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ.

ಮಾಸಿಕ ಸುಮಾರು 50 ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ಅವುಗಳಲ್ಲಿ 35,000 ದ್ವಿಚಕ್ರ ವಾಹನಗಳು ಮತ್ತು 8,000 ಕಾರ್ಗಳು ಪ್ರತಿ ತಿಂಗಳು ನೋಂದಣಿಯಾಗುತ್ತಿವೆ. ಓಡಾಡುವ ವಾಹನಗಳ ಸಂಖ್ಯೆ ಮಾತ್ರ ದೊಡ್ಡದಾಗಿದೆ. ಶೇ 66 ರಷ್ಟು ರಸ್ತೆಗಳು ಬೃಹತ್ ನಗರದ ಸ್ವರೂಪ ಪಡೆದುಕೊಳ್ಳುವ ಮುಂಚೆ ಇದ್ದಷ್ಟೇ ಕಿರಿದಾಗಿ ಉಳಿದಿವೆ.

ಕೆಲವು ಕಡೆ ಅವಕಾಶವಿದ್ದಲ್ಲಿ ರಸ್ತೆ ವಿಸ್ತರಣೆ ಮಾಡಿದ್ದರೂ ಅಷ್ಟೇನೂ ಬದಲಾವಣೆ ಕಂಡುಬರುತ್ತಿಲ್ಲ. ರಸ್ತೆ ಅಗಲ ಹೆಚ್ಚಾದಷ್ಟೂ ಆ ಮಾರ್ಗದಲ್ಲಿ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ಟ್ರಾಫಿಕ್ ಸಂಕಟವನ್ನು ತಗ್ಗಿಸಲು ಸಿಕ್ಕ ಉಪಾಯ ಫ್ಲೈಓವರ್ ಮತ್ತು ಅಂಡರ್ಪಾಸ್ಗಳ ನಿರ್ಮಾಣ. ಪ್ರತಿಭಟನೆ, ವಿರೋಧಗಳ ನಡುವೆಯೇ ನಡೆದವು.

ಸುಮಾರು 55 ಮೇಲ್ಸೇತುವೆಗಳಿವೆ. ಫ್ಲೈಓವರ್ಗಳು ಕೂಡ ವಾಹನಗಳಿಂದ ತುಂಬಿಕೊಂಡಿರುತ್ತವೆ. ಫ್ಲೈ ಓವರ್ ಮೇಲೆ ಕೂಡ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಪರಿಸ್ಥಿತಿಗೆ ಉಂಟಾಗಿದೆ. ಅಧಿಕ ಸಂಖ್ಯೆಯ ಏಕಮುಖ ಸಂಚಾರ (ಒನ್ ವೇ) ರಸ್ತೆಗಳಿರುವುದು ಕೂಡ ಸಂಚಾರ ದಟ್ಟಣೆಯ ಹೆಚ್ಚಳಕೆ ಕಾರಣ ಎಂದು ಅನೇಕ ತಜ್ಞರು ಅಭಿಪ್ರಾಯಪಡುತ್ತಾರೆ. ಕೆಲವೆಡೆ ಸಿಗ್ನಲ್ಗಳಿದ್ದರೂ ಪಾದಚಾರಿಗಳಿಗೆ ರಸ್ತೆ ಅಥವಾ ಒಂದು ವೃತ್ತವನ್ನು ದಾಟುವುದು ಸುಲಭವಾಗುವುದಿಲ್ಲ.

ಬಿಎಂಟಿಸಿ ಬಸ್ಗಳ ಸಂಖ್ಯೆ 6,419, ಬಸ್ ದರ ಹೆಚ್ಚಳದ ಕಾರಣಕ್ಕೆ ಸ್ವಂತ ವಾಹನಗಳನ್ನು ಬಳಸುವುದೇ ಲೇಸು ಎಂದು ಹೆಚ್ಚಿನವರು ಭಾವಿಸುತ್ತಿದ್ದಾರೆ.

ಮುಂಬೈ, ಚೆನ್ನೈ ಮತ್ತು ಕೋಲ್ಕತಾ ನಗರಗಳಲ್ಲಿ ಉಪನಗರ ರೈಲ್ವೆ ಸಂಪರ್ಕ ಚೆನ್ನಾಗಿದೆ. ಎರಡನೆಯ ಎ ಹಂತ ಮತ್ತು ಬಿ ಹಂತ (ಕೆಆರ್ ಪುರಂದಿಂದ ವಿಮಾನ ನಿಲ್ದಾಣ) ಇನ್ನೂ ಪೂರ್ಣಗೊಂಡಿಲ್ಲ. ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಅಥವಾ ಔಟರ್ ರಿಂಗ್ ರೋಡ್ನಲ್ಲಿ ಕೆಲಸ ಮಾಡುವ ಸುಮಾರು 10 ಲಕ್ಷ ಮಂದಿ ಇಲ್ಲಿ ಓಡಾಡಕ್ಕೆ ಈಗಲೂ ಖಾಸಗಿ ಅಥವಾ ಸ್ವಂತ ವಾಹನಗಳನ್ನೇ ಅವಲಂಬಿಸುವಂತಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos