ಟ್ರ್ಯಾಕ್ಟರ್ ಟ್ರಾಲಿಗೆ ಢಿಕ್ಕಿ: ಆರು ಜನ ಸಾವು

ಟ್ರ್ಯಾಕ್ಟರ್ ಟ್ರಾಲಿಗೆ ಢಿಕ್ಕಿ: ಆರು ಜನ ಸಾವು

ಉತ್ತರ ಪ್ರದೇಶ : , ಜೂನ್.6, ನ್ಯೂಸ್ ಎಕ್ಸ್ ಪ್ರೆಸ್  :  ಟ್ರ್ಯಾಕ್ಟರ್‌ ಟ್ರಾಲಿಗೆ ಟ್ರಕ್‌ ಢಿಕ್ಕಿಯಾದ ಭೀಕರ ಅವಘಡದಲ್ಲಿ ಆರು ಮಂದಿ ಮೃತಪಟ್ಟು ಇತರ 30 ಮಂದಿ ಗಾಯಗೊಂಡ ಘಟನೆ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಿಂದ ನಡದಿದೆ.

ಜಿಲ್ಲೆಯ ಸದರ್‌ಪುರದಲ್ಲಿ ನಿನ್ನೆ ಬುಧವಾರ ತಡ ರಾತ್ರಿ ಈ ಅವಘಡ ನಡೆದಿದೆ. ಟ್ರ್ಯಾಕ್ಟರ್‌ ಟ್ರಾಲಿಯಲ್ಲಿ 42 ಮಂದಿ ಇದ್ದರು. ಇವರು ಕಾರ್ಯಕ್ರಮವೊಂದನ್ನು ಮುಗಿಸಿ ಊರಿಗೆ ಮರಳುತ್ತಿದ್ದರು. ಗಾಯಗೊಂಡ 16 ಮಂದಿಯನ್ನು ಹರ್ದೋಯಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಉಳಿದವರಿಗೆ ಬಿಲ್‌ಗಾಮ್‌ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos