ಬೀದಿ ನಾಯಿಗಳ ಜೀವ ಉಳಿಸಲು ತೌಸೀಫ್ ಉಪಾಯ!

ಬೀದಿ ನಾಯಿಗಳ ಜೀವ ಉಳಿಸಲು ತೌಸೀಫ್ ಉಪಾಯ!

ಮಂಗಳೂರು, ಏ. 26, ನ್ಯೂಸ್ ಎಕ್ಸ್ ಪ್ರೆಸ್: ದೇಶದಲ್ಲಿ ಅತಿಹೆಚ್ಚು ಅಪಘಾತಕ್ಕೆ ಒಳಗಾಗುವ ಪ್ರಾಣಿ ಪ್ರಬೇಧವೆಂದರೆ ಅದು ಬೀದಿನಾಯಿಗಳು, ನೀರು-ಆಹಾರಕ್ಕೆ ಬೀದಿ ಬೀದಿ ಅಲೆಯುವ ಈ ಶ್ವಾನಗಳು ಅನೇಕ ಬಾರಿ ವಾಹನಗಳ ಗಾಲಿಗೆ ಸಿಲುಕಿ ಸಾಯುತ್ತವೆ. ಆದರೆ ಇದನ್ನು ತಪ್ಪಿಸಲು ವ್ಯಕ್ತಿಯೊಬ್ಬ ಹೊಸ ಪ್ಲಾನ್‌ ಮಾಡಿದ್ದಾರೆ. ಮಂಗಳೂರು ಮೂಲದ ತೌಸೀಫ್‌ ಅಹಮದ್‌ ಕಳೆದ ಒಂದೂವರೆ ತಿಂಗಳಿನಿಂದ ಬೀದಿ ನಾಯಿಗಳನ್ನು ರಕ್ಷಿಸಲು ಹೊಸ ಅಭಿಯಾನವನ್ನು ಆರಂಭಿಸಿದ್ದು, ಈ ಅಭಿಯಾನದಲ್ಲಿ ನಾಯಿಗಳ ಕತ್ತಿಗೆ ರಿಫ್ಲೆಕ್ಟಿಂಗ್‌ ಕಾಲರ್‌ ಹಾಕಲಾಗುತ್ತಿದೆ. ಇದರಿಂದ ಶ್ವಾನಗಳು ಬರುವುದು ರಾತ್ರಿ ವೇಳೆಯೂ ವಾಹನ ಚಾಲಕರಿಗೆ ತಿಳಿಯಲಿದೆ. 45 ವರ್ಷದ ತೌಸೀಫ್‌ ಬೀದಿನಾಯಿಗಳು ಅಪಘಾತದಿಂದ ಸಾಯುವುದನ್ನು ಕಂಡು, ಅವುಗಳನ್ನು ಕಾಪಾಡಲು ಈ ಯೋಜನೆ ರೂಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಬೀದಿ ನಾಯಿಗಳನ್ನು ರಕ್ಷಿಸಲು ಅನೇಕರು ಮುಂದೆ ಬರುವುದಿಲ್ಲ. ಅತಿ ವೇಗವಾಗಿ ಬರುವ ಚಾಲಕರು ನಾಯಿಗಳನ್ನು ಹೊಡೆದುಕೊಂಡು ಹೋಗುತ್ತಾರೆ. ಆದ್ದರಿಂದ ರಿಫ್ಲೆಟಿಂಗ್‌ ಕಾಲರ್‌ ಹಾಕುತ್ತಿದ್ದೇನೆ. ಕಳೆದ ಒಂದೂವರೆ ತಿಂಗಳಿನಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಅಭಿಯಾನ ಶುರುವಾದ ಬಳಿಕ ಅದೃಷ್ಟವಶಾತ್ ಯಾವೊಂದು ಶ್ವಾನವೂ ಅಪಘಾತದಲ್ಲಿ ಸಿಲುಕಿಲ್ಲ ಎಂದಿದ್ದಾರೆ. ತೌಸೀಫ್‌ ಅವರ ಈ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಈ ರೀತಿಯ ಸೇವೆಯನ್ನು ಎಲ್ಲರು ಮಾಡಬೇಕು ಎನ್ನುವ ಮಾತನ್ನು ಕೆಲವರು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos