ಟೋಪಿವಾಲಾನ ಅಸಲಿ ಆಸ್ತಿ!

ಟೋಪಿವಾಲಾನ ಅಸಲಿ ಆಸ್ತಿ!

ಬೆಂಗಳೂರು, ಜು. 20 : ನಗರದಲ್ಲಿ ಹಲವಾರು ಜನರಿಗೆ ಹಣದ ಮೋಸ ಮಾಡಿ ಇತ್ತೀಚೆಗೆ ವಿದೇಶಕ್ಕೆ ಹಾರಿದ್ದ ಮನ್ಸೂರ್ ಖಾನ್, ಇದೀಗ ಸೆರೆ ಸಿಕ್ಕಿದ್ದು, ಈವರೆಗೆ ಆತ ಕೂಡಿಟ್ಟ ಆಸ್ತಿ ಬಗ್ಗೆ ಎಸ್ಐಟಿ ಟೀಂ ಮಾಹಿತಿ ಸಂಗ್ರಹಿಸಿದೆ. ಈ ಆಸ್ತಿ ಜಪ್ತಿ ಮಾಡಲು ಸರ್ಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಕಂದಾಯ ಇಲಾಖೆ ಇದೀಗ ಮನ್ಸೂರ್ ಖಾನ್ ಆಸ್ತಿ ಪಟ್ಟಿ ಮಾಡಿದ್ದು, ಒಟ್ಟು 23 ಕಡೆ 279 ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ಹಾಗೆ 4 ಜ್ಯೂವೆಲ್ಲರಿಗಳಲ್ಲಿ 65 ಕೋಟಿ ಬೆಲೆ ಬಾಳುವ ಚಿನ್ನಾಭರಣ ಹಾಗೂ ಹಲವು ಬ್ಯಾಂಕ್ ಖಾತೆಗಳಲ್ಲಿ 12 ಕೋಟಿ ನಗದು. ಇವೆಲ್ಲವನ್ನೂ ಜಪ್ತಿ ಮಾಡಲು ಕಂದಾಯ ಇಲಾಖೆ ಈ ಬಗ್ಗೆ ನೋಟಿಫಿಕೇಷನ್ ಹೊರಡಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos