ತೊಂಡೆ ಕಾಯಿಯಲ್ಲಿದೆ ಹಲವು ಆರೋಗ್ಯ ಲಕ್ಷಣಗಳು

ತೊಂಡೆ ಕಾಯಿಯಲ್ಲಿದೆ ಹಲವು ಆರೋಗ್ಯ ಲಕ್ಷಣಗಳು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ದಿನನಿತ್ಯ ಬಳಸುವಂತಹ ಪದಾರ್ಥಗಳಲ್ಲಿ ನಮ್ಮ ಆರೋಗ್ಯ ಅಡಗಿದೆ ಅದನ್ನು ನಾವು ಸರಿಯಾದ ಕ್ರಮದಲ್ಲಿ ಬಳಸಿದರೆ ನಮ್ಮ ಆರೋಗ್ಯ ಸಹ ವೃದ್ಧಿಯಾಗುತ್ತದೆ

ಸಾಧಾರಣವಾಗಿ ಬಳ್ಳಿಯ ರೀತಿ ಹಬ್ಬುವ ತೊಂಡೆಕಾಯಿ ಗಿಡ ನಮ್ಮ ಭಾರತ, ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಇಲ್ಲಿನ ಜನರು ಬಹಳ ಹಿಂದಿನ ಕಾಲದಿಂದ ತಮ್ಮ ತಮ್ಮ ಔಷಧೀಯ ಪದ್ಧತಿಗಳಲ್ಲಿ ತೊಂಡೆಕಾಯಿಯ ಬಳ್ಳಿ, ಎಲೆ, ಬೇರು ಮತ್ತು ಕಾಯಿಗಳನ್ನು ಗಿಡಮೂಲಿಕೆಯ ರೀತಿ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸುತ್ತಾ ಬಂದಿದ್ದಾರೆ.

ತುಂಬಾ ದಿನಗಳಿಂದ ಅಜೀರ್ಣತೆ ಅಥವಾ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೊಂಡೆಕಾಯಿ ಬಹಳ ಅಚ್ಚುಕಟ್ಟಾಗಿ ಪರಿಹಾರ ಒದಗಿಸುತ್ತದೆ. ಇದರಲ್ಲಿರುವ ಹೆಚ್ಚಾದ ನೀರಿನ ಅಂಶ ಮತ್ತು ನಾರಿನ ಅಂಶದ ಕಾರಣದಿಂದ ಮನುಷ್ಯನ ಜೀರ್ಣ ಕ್ರಿಯೆಗೆ ಸಂಬಂಧ ಪಟ್ಟ ಸಾಕಷ್ಟು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತದೆ. ಬೇರೆ ಯಾವುದೇ ತರಕಾರಿಗಳಿಗೆ ಹೋಲಿಸಿದರೆ ತೊಂಡೆಕಾಯಿ ತುಂಬಾ ಆರೋಗ್ಯಕರ ಎಂದು ಬಣ್ಣಿಸಲಾಗಿದೆ.

ತೊಂಡೆಕಾಯಿ ತಿನ್ನುವ ಮುಖ್ಯ ಉದ್ದೇಶವೇ ಮಧುಮೇಹದ ನಿವಾರಣೆ ಎಂದು ಹೇಳಬಹುದು. ಏಕೆಂದರೆ ಬಹಳ ಹಿಂದಿನ ದಿನಗಳಿಂದ ನಮ್ಮ ಹಿರಿಯರು ಯಾರಿಗಾದರೂ ದೇಹದಲ್ಲಿ ಏರುಪೇರಾಗುವ ಸಕ್ಕರೆ ಅಂಶದ ಪ್ರಮಾಣವನ್ನು ಸಹಜ ಸ್ಥಿತಿಯ ಮರಳಿಸಲು ತೊಂಡೆಕಾಯಿಯ ಖಾದ್ಯಗಳನ್ನು ಸೇವಿಸಲು ಸೂಚಿಸುತ್ತಿದ್ದರು.

ಮಧುಮೇಹ ಈಗಾಗಲೇ ನಿಯಂತ್ರಣ ತಪ್ಪಿ ಹೋಗಿರುವವರಿಗೆ ತೊಂಡೆಕಾಯಿ ಎಲೆಗಳ ಜ್ಯೂಸ್ ತಯಾರು ಮಾಡಿ ಪ್ರತಿ ದಿನ ಕುಡಿಯಲು ಹೇಳುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹೀಗಾಗಿ ಅವರು ತಮ್ಮ ಸಂಶೋಧನೆಯಲ್ಲಿ ಇಲಿಗಳ ಮೇಲೆ ಪ್ರಯೋಗ ಮಾಡಿ ಅಸ್ತಮಾ ಮತ್ತು ಇನ್ನಿತರ ಕೆಲವೊಂದು ಅಲರ್ಜಿ ಸಮಸ್ಯೆಗಳಿಗೆ ತೊಂಡೆಕಾಯಿ ಪರಿಹಾರವಾಗಿ ಕೆಲಸ ಮಾಡಬಲ್ಲದು ಎಂದು ವೈಜ್ಞಾನಿಕವಾಗಿ ಸಾಬೀತು ಮಾಡಿದ್ದಾರೆ.

ತೊಂಡೆಕಾಯಿಗಳಿಂದ ಕೇವಲ ಮೇಲಿನ ಸಣ್ಣ ಪುಟ್ಟ ಉಪಯೋಗಗಳು ಮಾತ್ರ ಲಭ್ಯವಾಗುತ್ತವೆ ಎಂದು ನೀವು ತಿಳಿದುಕೊಂಡಿದ್ದರೆ, ಖಂಡಿತ ಅದು ತಪ್ಪು. ಗುಣಪಡಿಸಲಾಗದ ಕ್ಯಾನ್ಸರ್ ರೋಗದ ವಿರುದ್ಧ ಹೊರಡುವಂತಹ ಶಕ್ತಿ ತೊಂಡೆಕಾಯಿಗಳಿಗೆ ಇದೆ ಎಂದು ಕಂಡು ಬಂದಿದೆ. ತೊಂಡೆಕಾಯಿ ಪಲ್ಯ, ಸಾರು, ಸಾಗು ಇತ್ಯಾದಿಗಳನ್ನು ನಿತ್ಯ ನಿಯಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಂಡರೆ ಮನುಷ್ಯನನ್ನು ಕ್ಯಾನ್ಸರ್ ಮಹಾಮಾರಿಯ ಹಾವಳಿಯಿಂದ ತಪ್ಪಿಸುತ್ತದೆ ಎಂದು ನಂಬಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos