ರಾಜ್ಯಾದ್ಯಂತ ನಾಳೆಯಿಂದ ಬಿಜೆಪಿ ಸದಸ್ಯತ್ವಅಭಿಯಾನ

ರಾಜ್ಯಾದ್ಯಂತ ನಾಳೆಯಿಂದ ಬಿಜೆಪಿ ಸದಸ್ಯತ್ವಅಭಿಯಾನ

ಬೆಂಗಳೂರುಜು, ಜು. 5 : ನಾಳೆ ಬಿಜೆಪಿ ಸದಸ್ಯತ್ವ ಅಭಿಯಾನ ಉದ್ಘಾಟನೆಗೊಳ್ಳಲಿದ್ದು, ರಾಜ್ಯದಲ್ಲಿ 5 ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದು, 50 ಲಕ್ಷ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದೆ ಎಂದು ರಾಜ್ಯ ಸಂಚಾಲಕ ಎನ್. ರವಿಕುಮಾರ್ ಹೇಳಿದ್ದಾರೆ.

ಜು. 23 ರಿಂದ 30 ರ ವರೆಗೆ ರಾಜ್ಯಾದ್ಯಂತ 15 ಸಾವಿರ ವಿಸ್ತಾರಕರು ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆ. 11 ರ ವರೆಗೆ ಅಭಿಯಾನ ನಡೆಯಲಿದ್ದು, ಕನಿಷ್ಠ 25 ಸದಸ್ಯರನ್ನು ಮಾಡುವವರು ಸಕ್ರಿಯ ಸದಸ್ಯತ್ವ ಪಡೆಯಲಿದ್ದಾರೆ. ರಾಜ್ಯದಲ್ಲಿ 2 ಲಕ್ಷ ಸಕ್ರಿಯ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದೆ ಎಂದರು.

ಬೆಂಗಳೂರಿನ ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬಿಜೆಪಿ ಸದಸ್ಯ ಅಭಿಯಾನವನ್ನು ನಾಳೆ ಸಂಜೆ 4 ಗಂಟೆಗೆ ಕೇಂದ್ರ ವಿದೇಶಾಂಗ ರಾಜ್ಯ ಸಚಿವ ವಿ.ಮುರಳೀಧರನ್, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಿದರೆ, ಅಮಿತ್ ಶಾ ತೆಲಂಗಾಣದಲ್ಲಿ ಚಾಲನೆ ನೀಡುವರು ಎಂದು ವಿವರಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos