ಮೆಜೆಸ್ಟಿಕ್ ನಲ್ಲಿ ಟಾಯ್ಲೆಟ್ ಬಸ್

ಮೆಜೆಸ್ಟಿಕ್ ನಲ್ಲಿ ಟಾಯ್ಲೆಟ್ ಬಸ್

ಬೆಂಗಳೂರು, ಡಿ . 24 : ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಅಂದಿನ ಕಾಲದಲ್ಲಿತ್ತು.  ಈಗ ಅದನ್ನು ಬದಲಾಯಿಸಿ  ಬಸ್ ನಿಲ್ದಾಣದಲ್ಲಿ ಟಾಯ್ಲೆಟ್ ಇಲ್ಲದಿದ್ದರೂ ಬಸ್ ನಲ್ಲಿಯೇ ಟಾಯ್ಲೆಟ್  ಅಂತಹ ಹೇಳ ಬಹುದಾಗಿದೆ. ಮನುಷ್ಯರಿಗೆ ಆಹಾರ  ಎಷ್ಟು ಮುಖ್ಯವೋ ಶುದ್ಧತೆಯು ಅಷ್ಟೆ ಅವಶ್ಯ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮೆಜೆಸ್ಟಿಕ್ ನಲ್ಲಿ ಟಾಯ್ಲೆಟ್ ಬಸ್ ಯೋಜನೆ ರೂಪಿಸಿದೆ. ಮಹಾರಾಷ್ಟ್ರದ ಪುಣೆ ಮಹಾನಗರ ಪಾಲಿಕೆ ಹಳೆಯ ಬಸ್‌ ನ್ನು ಮಾರ್ಪಡಿಸಿ, 2016ರಲ್ಲಿ ಮಹಿಳೆಯರಿಗಾಗಿ ಹೈಟೆಕ್‌ ಮಾದರಿ ಶೌಚಾಲಯವನ್ನು ನಿರ್ಮಿಸಿದೆ. ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಹೈಟೆಕ್‌ ‘ಸ್ತ್ರೀ ಶೌಚಾಲಯ’ ವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನಿರ್ಮಿಸುತ್ತಿದೆ. ಅತ್ಯಾಧುನಿಕ ಮಾದರಿ ಶೌಚಾಲಯ ನಿರ್ಮಾಣಕ್ಕಾಗಿ ಹಳೆಯ ಗುಜರಿ ಬಸ್‌ ಬಳಕೆ ವಿಶೇಷ. ಮೆಜೆಸ್ಟಿಕ್ ನಿಲ್ದಾಣದಿಂದ ನಿತ್ಯ 2867 ಬಸ್‌ಗಳು ರಾಜ್ಯ ಸೇರಿ ಹೊರರಾಜ್ಯದ ನಾನಾ ಭಾಗಗಳಿಗೆ ಕಾರ್ಯಾಚರಣೆಯಲ್ಲಿ ತೊಡಗಿವೆ. ಲಕ್ಷಾಂತರ ಮಂದಿ ಪ್ರಯಾಣಿಕರು ಬಂದು ಹೋಗುವ ನಿಲ್ದಾಣದಲ್ಲಿ ಕೇವಲ ಐದು ಶೌಚಾಲಯಗಳು ಮಾತ್ರ ಹೊಸದಾಗಿ ಕಟ್ಟಡ ನಿರ್ಮಿಸಿ, ಶೌಚಾಲಯ  ಕಲ್ಪಿಸುವ ಸ್ಥಳಾವಕಾಶ ವಿಲ್ಲದ ಕಾರಣ  ಗುಜರಿ ಬಸ್‌ಗಳನ್ನೇ ಶೌಚಾಲಯಗಳನ್ನಾಗಿ ಮಾರ್ಪಡಿಸಲು ಸಂಸ್ಥೆಯು ತೀರ್ಮಾನಿಸಿದೆ.

ಶೌಚಾಲಯ ನಿರ್ಮಾಣಕ್ಕೆ 12 ಲಕ್ಷ ವೆಚ್ಚ :

ಶೌಚಾಲಯ ನಿರ್ಮಾಣಕ್ಕೆ ತಗಲುವ 12 ಲಕ್ಷ ರೂ. ವೆಚ್ಚವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಭರಿಸುತ್ತಿದೆ. ಕೆಂಗೇರಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿರುವ ಹಳೆಯ ಕರೋನಾ ಸ್ಲೀಪರ್‌  ಬಸ್ ಶೌಚಾಲಯ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ. ಸಂಸ್ಥೆಯು ಪ್ರತಿ ವರ್ಷವೂ 700-800 ಬಸ್‌ಗಳನ್ನು ಗುಜರಿಗೆ ಹಾಕುತ್ತದೆ. ಈ ಬಸ್‌ಗಳು 1.50 ಲಕ್ಷ ರೂ.ನಿಂದ 1.70 ಲಕ್ಷ ರೂ.ಗಳಿಗಷ್ಟೇ ಬಿಕರಿಯಾಗುತ್ತಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿಗುಜರಿ ಬಸ್‌ಗಳನ್ನು ಖರೀದಿಸಲು ಯಾರೂ ಮುಂದಾಗುತ್ತಿಲ್ಲ. ಹಾಗಾಗಿ, ಹಳೆಯ ಬಸ್‌ಗಳನ್ನು ಮಾರ್ಪಡಿಸಿ, ಹೊಸ ಹೊಸ ಪ್ರಯೋಗಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos