ಇಂದು ಸಿಲಿಕಾನ್ ನಲ್ಲಿ ಮಳೆಯಾಗುತ್ತಾ?

ಇಂದು ಸಿಲಿಕಾನ್ ನಲ್ಲಿ ಮಳೆಯಾಗುತ್ತಾ?

ಬೆಂಗಳೂರು, ಏ.09 : ಬೆಂಗಳೂರಿನಲ್ಲಿ ಸೋಮವಾರ, ಬುಧವಾರ ಭಾರೀ ಮಳೆಯಾಗಿತ್ತು. ಸಂಜೆ ವೇಳೆ ಶುರುವಾದ ಮಳೆ ಬೆಂಗಳೂರಿಗರ ಬೇಸಿಗೆ ಸೆಂಖ್ಯೆಯನ್ನು ಕಡಿಮೆ ಮಾಡಿತ್ತು. ಹಾಗಾದರೆ ಇಂದು ಸಂಜೆ ಹವಾಮಾನ ಹೇಗಿರಲಿದೆ ಎನ್ನುವ ಪ್ರಶ್ನೆ. ಇಂದು ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಉಂಟಾಗಲಿದೆ. ಸುಮಾರು 30-45 ನಿಮಿಷಗಳ ಕಾಲ ಮಳೆಯ ಅಬ್ಬರ ಮುಂದುವುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಲಾಕ್ಡೌನ್ ಹಿನ್ನೆಲ್ಲೆ ಬಹುತೇಕರು ಮನೆಯಲ್ಲೇ ಇದ್ದಾರೆ.  ದಿನಸಿ, ಹಾಲು, ತರಕಾರಿ ಇತ್ಯಾದಿ ವಸ್ತುಗಳನ್ನು ತರಲು ಹೊರ ಹೋಗುವ ಯೋಜನೆ ನಿಮ್ಮದಾದರೆ ಸಂಜೆ ವೇಳೆ ಹೋಗದಿದ್ದರೆ ಉತ್ತಮ. ಇಲ್ಲದಿದ್ದರೆ ನೀವು ಮಳೆಯಲ್ಲಿ ಸಿಕ್ಕಿ ಬೀಳೋದು ಗ್ಯಾರಂಟಿ.

ಫ್ರೆಶ್ ನ್ಯೂಸ್

Latest Posts

Featured Videos