‘ಕೋಟಿಗೊಬ್ಬ 3’ ಚಿತ್ರ ಇಂದಿನಿಂದ ಚಿತ್ರಿಕರಣ ಪ್ರಾರಂಭ

‘ಕೋಟಿಗೊಬ್ಬ 3’ ಚಿತ್ರ ಇಂದಿನಿಂದ ಚಿತ್ರಿಕರಣ ಪ್ರಾರಂಭ

ಬೆಂಗಳೂರು, ಮಾ.6, ನ್ಯೂಸ್ ಎಕ್ಸ್ ಪ್ರೆಸ್: ಕಿಚ್ಚ ಸುದೀಪ್ ಅಭಿನಯದ  ‘ಕೋಟಿಗೊಬ್ಬ 3’  ಚಿತ್ರ ಇಂದಿನಿಂದ ಚಿತ್ರಿಕರಣ ಪ್ರಾರಂಭವಾಗುತ್ತಿದೆ. ಇಷ್ಟು ದಿನ ‘ಪೈಲ್ವಾನ್’ ಸಿನಿಮಾದ ಶೂಟಿಂಗ್ ನಲ್ಲಿ ಸುದೀಪ್ ಫುಲ್ ಬ್ಯುಸಿ ಇದ್ದರು.

ಅದರ ನಂತರ ಮತ್ತೆ ‘ಕೋಟಿಗೊಬ್ಬ 3’ ಟೀಮ್ ಸೇರಿಕೊಂಡಿದ್ದಾರೆ. ಈ ಬಗ್ಗೆ ಕಿಚ್ಚ ಅವರು ಟ್ವೀಟ್ ಮಾಡಿದ್ದಾರೆ. ‘ಪೈಲ್ವಾನ್’ ಸುತ್ತಿ ಇದೀಗ ಇನ್ನೊಂದು ಚಿತ್ರದ ಸೆಟ್ ಗೆ ಬಂದಿದ್ದೇನೆ. ನನ್ನ ಹೊಸ ತಂಡವನ್ನು ಸೇರಿಕೊಂಡಿದ್ದೇನೆ. ಶಾಲೆ ಬದಲಾಯಿಸಿದ ಮಗುವಿನ ಹಾಗೆ ನನಗೀಗ ಫೀಲ್ ಆಗುತ್ತಿದೆ. ಆದರೆ ಈ ಭಾವನೆಯೇ ಅಧ್ಭುತ.” ಎಂದಿದ್ದಾರೆ.

‘ಪೈಲ್ವಾನ್’ ನಂತರ ‘ಕೋಟಿಗೊಬ್ಬ 3’ ಚಿತ್ರದ ಕೆಲಸದಲ್ಲಿ ಸುದೀಪ್ ತೊಡಗಿದ್ದಾರೆ. ಸೂರಪ್ಪ ಬಾಬು ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಇದು ಶಿವ ಕಾರ್ತಿಕ್ ನಿರ್ದೇಶನ ಚಿತ್ರವಾಗಿದೆ.

ಸುದೀಪ್ ಗೆ ಜೋಡಿಯಾಗಿ ‘ಪ್ರೇಮಂ’ ಖ್ಯಾತಿಯ ನಟಿ ಮಡೋನ ಸೆಬಾಸ್ಟಿಯನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಫ್ತಾಬ್ ಶಿವದಾಸಾನಿ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರದ್ಧಾ ದಾಸ್ ಸಹ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos