ಇಂದು ಕಲಾಂ ಹುಟ್ಟು ಹಬ್ಬ

ಇಂದು ಕಲಾಂ ಹುಟ್ಟು ಹಬ್ಬ

ನವದೆಹಲಿ, ಅ.15 : ಮಿಸೈಲ್ ಮ್ಯಾನ್ ಎಂದು ಖ್ಯಾ ತಿಗಳಿಸಿರುವ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. 2010ರಲ್ಲಿ ಅ. 15 ವಿಶ್ವ ವಿದ್ಯಾರ್ಥಿಗಳ ದಿನ ಎಂದು ವಿಶ್ವಸಂಸ್ಥೆ ಘೋಷಿಸಿತ್ತು. ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿರುವ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಶಿಕ್ಷಕರಾಗಿ ಸಲ್ಲಿಸಿದ್ದ ಸೇವೆಯನ್ನು ಸ್ಮರಿಸದಿದ್ದರೆ ಅವರ ಕೊಡುಗೆ ಬಗ್ಗೆ ಸಂಪೂರ್ಣವಾಗಿ ಹೇಳಿದಂತೆ ಆಗುವುದಿಲ್ಲ. ಹೀಗಾಗಿ ಡಾ.ಕಲಾಂ ಅವರು ಶಿಕ್ಷಕರಾಗಿ ತುಂಬಾ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು ಮತ್ತು ತಮ್ಮನ್ನು ಅವರು ಮೊದಲು ಶಿಕ್ಷಕ ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದರು. ಉಳಿದಿದ್ದೆಲ್ಲವೂ ಅವರಿಗೆ ಎರಡನೇ ಆದ್ಯತೆಯಾಗಿತ್ತು ಎಂದು ವರದಿ ವಿವರಿಸಿದೆ.
ಅವುಲ್ ಪಕೀರ್ ಜೈನುಲಬ್ದದೀನ್ ಅಬ್ದುಲ್ ಕಲಾಂ ಅವರು 1931 ಅಕ್ಟೋಬರ್ 15ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ್ದರು. 2007ರಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ವಿಜ್ಞಾನಿಯಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದ ಡಾ.ಕಲಾಂ ಅವರು ಶಿಲ್ಲಾಂಗ್ ನಲ್ಲಿ 2015ರ ಜುಲೈ 27ರಂದು ವಿಧಿವಶರಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos