ಇಂದು 4ನೇ ಹಂತದ ಮತದಾನ: ಸೆಲೆಬ್ರಿಟಿಗಳಿಂದ ವೋಟಿಂಗ್

ಇಂದು 4ನೇ ಹಂತದ ಮತದಾನ: ಸೆಲೆಬ್ರಿಟಿಗಳಿಂದ ವೋಟಿಂಗ್

ನವದೆಹಲಿ, . 29, ನ್ಯೂಸ್ ಎಕ್ಸ್ ಪ್ರೆಸ್:  ಲೋಕಸಭಾ ಚುನಾವಣೆಗೆ ಇಂದು 4ನೇ ಹಂತದ ಮತದಾನ ನಡೆಯುತ್ತಿದೆ. 9 ರಾಜ್ಯಗಳ ಒಟ್ಟು 72 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಹಾರಾಷ್ಟ್ರದ 17 ಕ್ಷೇತ್ರಗಳು, ರಾಜಸ್ಥಾನ ಹಾಗೂ ಉತ್ರರಪ್ರದೇಶದಲ್ಲಿ ತಲಾ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದಲ್ಲಿ 8 ಕ್ಷೇತ್ರಗಳು, ಮಧ್ಯಪ್ರದೇಶ ಹಾಗೂ ಒಡಿಶಾದಲ್ಲಿ 6, ಬಿಹಾರದ 5, ಜಾರ್ಖಂಡ್ನಲ್ಲಿ 3 ಹಾಗೂ ಜಮ್ಮು ಕಾಶ್ಮೀರದ ಅನಂತ್ನಾಗ್ ಕ್ಷೇತ್ರದ ಒಂದು ಭಾಗದಲ್ಲಿ ಇಂದು ಮತದಾನವಾಗುತ್ತಿದೆ. ಇಂದಿನ ಚುನಾವಣೆಯಲ್ಲಿ ಹೈಲೈಟ್ ಅಂದರೆ ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ಕೋಟ್ಯಾಧಿಪತಿ ಉದ್ಯಮಿಗಳು ನೆಲೆಸಿರುವ ಮುಂಬೈ ಕ್ಷೇತ್ರ.

ಬೆಳಗ್ಗೆಯಿಂದಲೇ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಗಣ್ಯರು ಮತದಾನ ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಜುಹೂ ಮತಗಟ್ಟೆಯಲ್ಲಿ ಇಂದು ಬೆಳಗ್ಗೆ ಮತದಾನ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos