ಗ್ರಾಮಕ್ಕೆ ಕಾಡಾನೆ ಲಗ್ಗೆ

ಗ್ರಾಮಕ್ಕೆ ಕಾಡಾನೆ ಲಗ್ಗೆ

ಹಾಸನ, ನ. 8 : ಆನೆ ನಡೆದದ್ದೇ ದಾರಿ ಎಂಬ ಮಾತಿಗೆ ಪುಷ್ಟಿ ನೀಡುವಂತಹ ಮಲೆನಾಡು ಭಾಗವಾದ ಸಕಲೇಶಪುರ, ಆಲೂರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ. ಪ್ರತಿ ನಿತ್ಯ ಆನೆಗಳ ಹಿಂಡು ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದು , ಗ್ರಾಮಸ್ಥರು ನಿದ್ದೆಗೆಡುವಂತಾಗಿದೆ. ಸಕಲೇಶಪುರ ತಾಲೂಕಿನ ಹೊಸಗದ್ದಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಂಭಾಗ ಒಂಟಿ ಸಲಗ ಕಾಣಿಸಿಕೊಂಡಿರುವುದು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರನ್ನು ಭಯಭೀತಗೊಳಿಸಿದೆ.

ಶಾಲಾ ಮುಂಭಾಗವೇ ಹಾದು ಹೋದ ಒಂಟಿ ಸಲಗ ರಾಜರೋಷವಾಗಿ ತನ್ನ ಗಂಭೀರ ನಡಿಗೆಯಲ್ಲಿ ಹೆಜ್ಜೆ ಹಾಕಿ ನಡೆಯುತ್ತಿದ್ದರೆ ಗ್ರಾಮದ ಜನರ ಎದೆಯಲ್ಲಿ ನಡುಕ ಶುರುವಾಗಿದೆ ದಿನ ಬೆಳಗಾದರೆ ಇದನ್ನು ನೋಡುತ್ತ ಸುಮ್ಮನಿರಬೇಕಾದ ಪರಿಸ್ಥಿತಿ ಇಷ್ಟು ದಿನ ಕಾಫಿ ತೋಟ ಗದ್ದಾಯಲ್ಲಿ ಬೆಳೆಗಳನ್ನು ತುಳಿದು ಹಾಳು ಮಾಡುತ್ತಿದ್ದ ಕಾಡಾನೆಗಳು ಇದೀಗ ಗ್ರಾಮಗಳಿಗೆ ಲಗ್ಗೆಯಿಡಲು ಆರಂಭಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos