ಟಿಕ್ ಟಾಕ್  ನಿಷೇದಕೆ ಕಡಿವಾಣ

ಟಿಕ್ ಟಾಕ್  ನಿಷೇದಕೆ ಕಡಿವಾಣ

ಬೆ0ಗಳೊರು, ಏ. 26, ನ್ಯೊಸ್ ಎಕ್ಸ್ಪೆಪ್ರೆಸ್‍: ಭಾರತ ಸೇರಿದಂತೆ ವಿಶ್ವದಾದ್ಯಂತ ಚಿಕ್ಕ ವಿಡಿಯೋ ಆಪ್ ಟಿಕ್ ಟಾಕ್ ಪ್ರಸಿದ್ಧಿ ಪಡೆದಿದೆ. ಟಿಕ್ ಟಾಕ್ ಆಪ್ ಮೇಲೆ ಹೇರಿದ್ದ ನಿಷೇಧವನ್ನು ತೆಗೆದು ಹಾಕಿದ್ರೂ ಬಳಕೆದಾರರಿಗೆ ನಿರಾಸೆಯಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಟಿಕ್ ಟಾಕ್ ಆಪ್ ಡೌನ್ಲೋಡ್ ಮಾಡಲು ಸಿಗ್ತಿಲ್ಲ.ಗೂಗಲ್ ಪ್ಲೇ ಸ್ಟೋರ್ ಮಾತ್ರವಲ್ಲ ಆಪಲ್ ಪ್ಲೇ ಸ್ಟೋರ್ ನಲ್ಲಿ ಕೂಡ ಟಿಕ್ ಟಾಕ್ ಆಪ್ ಸಿಗ್ತಿಲ್ಲ. ಬುಧವಾರವೇ ನಿಷೇಧವನ್ನು ತೆರವುಗೊಳಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕಂಪನಿಗಳ ಜೊತೆ ಅಧಿಕೃತ ಮಾತುಕತೆ ನಡೆಸಿದ ನಂತ್ರ ಆಪ್ ಡೌನ್ಲೋಡ್ ಗೆ ಸಿಗುವ ಸಾಧ್ಯತೆಯಿದೆ.ಇದಕ್ಕೂ ಮುನ್ನ ಗೂಗಲ್ ಹಾಗೂ ಆಪಲ್ ಜೊತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾತುಕತೆ ನಡೆಸಿ, ಆಪ್ ತೆಗೆದುಹಾಕುವಂತೆ ಸೂಚನೆ ನೀಡಿತ್ತು. ಮದ್ರಾಸ್ ಹೈಕೋರ್ಟ್ ಬುಧವಾರ ವಿಚಾರಣೆ ನಡೆಸಿ ನಿಷೇಧ ತೆರವುಗೊಳಿಸಿದೆ. ಜೊತೆಗೆ ಷರತ್ತು ವಿಧಿಸಿದೆ. ಅಶ್ಲೀಲತೆಗೆ ಸಂಬಂಧಿಸಿದ ಯಾವುದೇ ವಿಡಿಯೋ ಅಪ್ಲೋಡ್ ಆಗಬಾರದು. ಹೀಗಾದಲ್ಲಿ 36 ಗಂಟೆಯೊಳಗೆ ಆಪ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರ್ಟ್ ಹೇಳಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos