ತಿರುಪತಿಯಲ್ಲಿ ಉಚಿತ ಲಡ್ಡು

ತಿರುಪತಿಯಲ್ಲಿ ಉಚಿತ ಲಡ್ಡು

ತಿರುಪತಿ, ಜ. 6 : ವಿಶ್ವ ವಿಖ್ಯಾತ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಇನ್ನು ಮುಂದೆ ಪ್ರತಿ ಭಕ್ತರಿಗೂ ಉಚಿತವಾಗಿ ಒಂದು ಲಡ್ಡು ದೊರೆಯಲಿದೆ. ಜ.20ರಿಂದ ದೇವರ ದರ್ಶನ ಪಡೆಯುವ ಭಕ್ತರಿಗೆ ತಲಾ ಒಂದು ಲಡ್ಡು ಪ್ರಸಾದವನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚುವರಿ ಲಡ್ಡು ಬೇಕಾದರೆ 50 ರೂ. ಪಾವತಿಸಬೇಕಾಗುತ್ತದೆ. ವಾರ್ಷಿಕವಾಗಿ ಶುಚಿ ಹಾಗೂ ರುಚಿಯಿಂದ ಕೂಡಿರುವ 2.5 ಕೋಟಿ ಲಡ್ಡು ತಯಾರಿಸಲಾಗುವುದು ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಟಾರೆಡ್ಡಿ ತಿಳಿಸಿದ್ದಾರೆ.

ಇದುವರೆಗೂ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಬರುತ್ತಿದ್ದ ಭಕ್ತರಿಗೆ ಮಾತ್ರ ಒಂದು ಉಚಿತ ಲಡ್ಡು ಸಿಗುತ್ತಿತ್ತು. ಸೋಮವಾರ ವೈಕುಂಠ ಏಕಾದಶಿಯಾಗಿದ್ದು, ಅಂದು ಸ್ವರ್ಗದ ಬಾಗಿಲು ತೆಗೆದಿರುತ್ತದೆ ಎಂಬ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇಗುಲಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಇದಕ್ಕಾಗಿ ದೇಗುಲದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದೂ ಟಿಟಿಡಿ ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos