ಬಿಜೆಪಿ ಮುಖಂಡರಿಂದ ಟಿಪ್ಪು ಜಯಂತಿ!?

ಬಿಜೆಪಿ ಮುಖಂಡರಿಂದ ಟಿಪ್ಪು ಜಯಂತಿ!?

ಹೊಸಕೋಟೆ, ಅ. 25: ರಾಜ್ಯದ ರಾಲಕೀಯದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಟಿಪ್ಪು ಜಯಂತಿ ಆಚರಿಸೊದಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ರಾಜಕೀಯ ಲಾಭಕ್ಕಾಗಿ ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ತಮ್ಮ ರಾಜಕೀಯ ಲಾಭಕ್ಕಾಗಿ ಈ ಬಾರಿ ಟಿಪ್ಪು ಜಯಂತಿಯಂದು ಟಿಪ್ಪು ಬಸ್ಸ್ ನಿಲ್ದಾಣ ಮತ್ತು ಟಿಪ್ಲು ಜಯಂತಿ ಆಚರಿಸುದಾಗಿ ಹೊಸಕೋಟೆ ತಾಲ್ಲೂಕಿನ ಬೆಂಡಿಗಾನಹಳ್ಳಿ ಸಮೀಪದ ತಮಸರನಹಳ್ಳಿಯಲ್ಲಿ ನಡೆಯುತ್ತಿದ್ದ ಉರುಸ್ ಕಾರ್ಯಕ್ರಮದಲ್ಲಿ ಹೇಳುತ್ತಿದ್ದಂತೇ ಮುಸ್ಲಿಂ ಬಂಧುಗಳು ಚಪ್ಪಾಳೆ ತಟ್ಟಿ, ಮುಸ್ಲಿಂ ಯುವಕನೊರ್ವ ಬಂಧು ಶರತ್ ಮೇಲೆ ಹಣ‌ ಸುರಿದು ಸಂಭ್ರಮಿಸಿದ. ಇದೀಗ ಇದು ಬಿಜೆಪಿಯಲ್ಲಿ ಕಿಚ್ಚು ಹಚ್ಚಿದೆ.

ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿರುವ ಶರತ್ ಬಚ್ಚೇಗೌಡ ಭಾಗವಹಿಸಿ ಮಾತನಾಡಿ, ಹಲವು ಭಾರಿ ಟಿಪ್ಪುಜಯಂತಿ ಆಚರಣೆ ಮಾಡದಂತೆ ಸಾಕಷ್ಟು ಜನ ಹೇಳಿದ್ದರು. ಅದ್ಯೇನಾಗುತ್ತೋ ನೋಡ್ತಿನಿ ನಮ್ಮೂರಿನ ಪಕ್ಕದಲ್ಲಿರುವ ತಮ್ಮರಸನಹಳ್ಳಿಯಲ್ಲಿ ನಾನೇ ಮುಂದೆ ನಿಂತುಕೊಂಡು ಈ ಭಾರಿ ಟಿಪ್ಪು ಜಯಂತಿಯನ್ನು ಅದ್ದೂರಿಯಾಗಿ ಮಾಡೇ ತೀರುತ್ತೇನೆ ಎಂದು ಹೇಳಿದ್ದಾರೆ.

ಟಿಪ್ಪುಜಯಂತಿ ಆಚರಿಸೋದಾಗಿ ಶರತ್ ಹೇಳಿದ ತಕ್ಷಣ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು, ಕಾರ್ಯಕರ್ತರು ಶರತ್ ಬಚ್ಚೇಗೌಡರ ಮೇಲೆ ಹಣ ಸುರಿದು ಹರ್ಷ ವ್ಯಕ್ತಪಡಿಸಿದರು. ಇನ್ನು ಇದೇ ಸಂದರ್ಭದಲ್ಲಿ ಶರತ್ ಹೇಳಿಕೆ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಸಾಕಷ್ಟು ಗೊಂದಲಗಳು ರಾಜ್ಯರಾಜಕೀಯದಲ್ಲಿ ನಿತ್ಯ ಒಂದಿಲ್ಲೊಂದು ಸುದ್ದಿ ಹೇಳುತ್ತಲೇ ಇದೆ. ಟಿಪ್ಪು ಜಯಂತಿಯನ್ನು ಶರತ್ ಬಚ್ಚೇಗೌಡ ಸಮ್ಮುಖದಲ್ಲಿ ಹೇಗೆ ನಡೆಸುತ್ತಾರೆ, ಇನ್ನು ಬಿಜೆಪಿಯಲ್ಲಿದ್ದುಕೊಂಡೇ ಇಂತಹ ಹೇಳಿಕೆಗಳನ್ನು ಶರತ್ ಬಚ್ಚೇಗೌಡ ಅವರು ನೀಡುತ್ತಿರುವುದು ಮುಂದೆ ಪಕ್ಷದಿಂದ ಅಧ್ಯಾವ ಶರತ್ತುಗಳು ಬೀಳುತ್ತವೆಯೋ ಎಂಬುದನ್ನು ಕಾದುನೋಡಬೇಕಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos