ಮರಗಳ್ಳತನ ತಡೆಗೆ ನೂತನ ತಂತ್ರಜ್ಞಾನ

ಮರಗಳ್ಳತನ ತಡೆಗೆ ನೂತನ ತಂತ್ರಜ್ಞಾನ

ಬೆಂಗಳೂರು.ನ,21: ಮರಗಳ್ಳತನ ತಡೆಗೆ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯು ಹೊಸ ತಂತ್ರಜ್ಞಾನ ಕ್ಕೆ ಮುಂದಾಗಿದೆ . ಸಂಸ್ಥೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಮಹಾನಿರ್ದೇಶಕ ಎಸ್.ಸಿ.ಗೇರೊಲಾ, ”ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿರುವುದರಿಂದ ಶ್ರೀಗಂಧ, ರಕ್ತಚಂದನ ಹಾಗೂ ಇತರೆ ಬೆಲೆಬಾಳುವ ಮರಗಳ ಕಳ್ಳತನ ಹೆಚ್ಚಾಗುತ್ತಿದೆ.
ಮರಗಳ ತೊಗಟೆಯಲ್ಲಿ ಮೈಕ್ರೊ ಚಿಪ್ಗಳನ್ನು ಅಳವಡಿಸಿದರೆ ಕಳವು ತಡೆಯಬಹುದು. ಯಾರಾದರೂ ಮರಗಳನ್ನು ಕಳ್ಳತನ ಮಾಡಲು ಯತ್ನಿಸಿದರೆ ಕೂಡಲೇ ಸಂಬಂಧಿಸಿದವರಿಗೆ ಮಾಹಿತಿ ರವಾನೆಯಾಗುತ್ತದೆ. ‘ಹಿಟಾಚಿ’ ಸಂಸ್ಥೆಯ ಸಹಯೋಗದಲ್ಲಿ ಚಿಪ್ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಆರಂಭವಾಗಿದೆ,” ಎಂದರು.

ಫ್ರೆಶ್ ನ್ಯೂಸ್

Latest Posts

Featured Videos