‘ರಗಡ್’ ಆಗಿ ಮಿಂಚುತ್ತಿರುವ ಮರಿ ಟೈಗರ್ ವಿನೋದ್ ಪ್ರಭಾಕರ್

‘ರಗಡ್’ ಆಗಿ ಮಿಂಚುತ್ತಿರುವ ಮರಿ ಟೈಗರ್ ವಿನೋದ್ ಪ್ರಭಾಕರ್

ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಸ್ಯಾಂಡಲ್​​​​ ವುಡ್​​​​ ಮರಿಟೈಗರ್, ಲೀಡಿಂಗ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಬಿರುದು ಪಡೆದ ವಿನೋದ್ ಪ್ರಭಾಕರ್ ಅಭಿನಯದ ‘ರಗಡ್’ ಚಿತ್ರ ಕಳೆದವಾರ ರಾಜ್ಯಾದ್ಯಂತ ಸುಮಾರು ೧೮೦ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.ಸಿನಿಮಾದಲ್ಲಿ ವಿನೋದ್ 8 ಪ್ಯಾಕ್​​​​​​​​​​​ನಲ್ಲಿ ಘರ್ಜಿಸಿದ್ದು ಸಿನಿಮಾ ನೋಡಿದ ಪ್ರೇಕ್ಷಕ ಇದು ಪಕ್ಕಾ ಪೈಸಾ ವಸೂಲ್​​​ ಸಿನಿಮಾ ಎಂದು ಪುಲ್​​​​​​​​​ಮಾರ್ಕ್ಸ್ ನೀಡಿದ್ದಾರೆ. ‘ರಗಡ್’ ಆ್ಯಕ್ಷನ್ ಚಿತ್ರವಾಗಿದ್ದು ಮಲ್ಟಿಪ್ಲೆಕ್ಸ್​​​​​​​​​​​​​​​​​​​​​​​​​​​​​ಗಳಲ್ಲಿ ಕಲೆಕ್ಷನ್ ಸಾಮಾನ್ಯವಾಗಿದ್ದರೂ ಬಿ.ಸಿ. ಸೆಂಟರ್​​​​​​​​​​​ಗಳಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ ಎಂದು ಚಿತ್ರತಂಡ ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡರು. ಅಲ್ಲದೆ ಮಲ್ಟಿಪ್ಲೆಕ್ಸ್​​​​​​​​​​​​​​​​​​ಗಳಲ್ಲಿ ‘ರಗಡ್’ ಚಿತ್ರಕ್ಕೆ ಪ್ರೈಮ್ ಟೈಂನಲ್ಲಿ ಶೋ ನೀಡದ ಕಾರಣ ಚಿತ್ರದ ಕಲೆಕ್ಷನ್ ಸ್ವಲ್ಪ ಕಡಿಮೆಯಾಗಿದೆ. ಹಾಗಾಗಿ ಪ್ರೈಂಟೈಮ್​​​ನಲ್ಲಿ ಶೋ ಕೊಡುವಂತೆ ಈಗಾಗಲೇ ಚಿತ್ರದ ನಿರ್ಮಾಪಕ ವಿತರಕ ಜಯಣ್ಣ ಅವರ ಜೊತೆ ಮಾತನಾಡಿದ್ದು ಮುಂದಿನ ವಾರ ,ಮತ್ತಷ್ಟು ಚಿತ್ರಮಂದಿರಗಳಲ್ಲಿ ‘ರಗಡ್’ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ತಿಳಿಸಿದರು. ಸಿನಿಮಾ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ಜನತೆಗೆ ವಿನೋದ್ ಪ್ರಭಾಕರ್ ಧನ್ಯವಾದಗಳನ್ನು ತಿಳಿಸಿದರು. ಚಿತ್ರದಲ್ಲಿ 8 ಪ್ಯಾಕ್ ನೋಡಿದ ಇತರ ನಿರ್ದೇಶಕರು ಕೂಡಾ ಮುಂದಿನ ಸಿನಿಮಾದಲ್ಲೂ ಬಾಡಿ ಮೆಂಟೇನ್ ಮಾಡಲು ಕೇಳುತ್ತಿದ್ದಾರೆ. ಆದರೆ ಇನ್ನೆರಡು ಚಿತ್ರಗಳ ನಂತರ ಮತ್ತೆ 8 ಪ್ಯಾಕ್ ಮಾಡುವುದಾಗಿ ತಿಳಿಸಿದರು. ಒಟ್ಟಿನಲ್ಲಿ ‘ರಗಡ್​’ ಮರಿಟೈಗರ್​​​​​​​​ಗೆ ಒಂದೊಳ್ಳೆ ಬ್ರೇಕ್​​​​ ಕೊಟ್ಟಿರುವುದಲ್ಲದೆ ನಿರ್ಮಾಪಕರು ಜೇಬು ಕೂಡಾ ತುಂಬಿಸಿದೆ ಎನ್ನಬಹುದು.

ಫ್ರೆಶ್ ನ್ಯೂಸ್

Latest Posts

Featured Videos