ಟೀಕ್ ಟಾಕ್ ನಿಂದ ಕೆಲಸ ಕಳೆದುಕೊಂಡ ವೈದ್ಯರು

ಟೀಕ್ ಟಾಕ್ ನಿಂದ ಕೆಲಸ ಕಳೆದುಕೊಂಡ ವೈದ್ಯರು

ಹೈದರಾಬಾದ್ , ಜು. 27 : ಇತ್ತೀಚಿನ ದಿನಗಳಲ್ಲಿ ಯುವಜನತೆ ಟಿಕ್ ಟಾಕ್ ಗೀಳಿಗೆ ಬಿದ್ದು ಅನಾಹುತ ಮಾಡಿಕೊಳ್ಳುತ್ತಿದ್ದಾರೆ. ಹೈದರಾಬಾದ್ನ ಗಾಂಧಿ ಆಸ್ಪತ್ರೆಯ ಪಿಸಿಯೋಥೆರೆಪಿ ವಿಭಾಗದ ತರಬೇತಿ ವೈದ್ಯರು ಟಿಕ್ ಟಿಕ್ ವಿಡಿಯೋ ಮಾಡುವ ಮೂಲಕ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಶ್ಯಾಮ್ ಮಿಲ್ಟನ್ ಹಾಗೂ ವೀಣಾ ಕುಮಾರಿ ಎಂದು ಗುರುತಿಸಲಾಗಿದೆ.
ಇಬ್ಬರು ತರಬೇತಿ ವೈದ್ಯರು ಕೆಲಸದ ವೇಳೆ ಟಿಕ್ ಟಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ ತರಬೇತಿ ವೈದ್ಯರು ಆಸ್ಪತ್ರೆಯಲ್ಲೇ ಒಟ್ಟು ನಾಲ್ಕು ಟಿಕ್ ಟಾಕ್ ವಿಡಿಯೋಗಳನ್ನು ಮಾಡಿದ್ದಾರೆ. ಕರ್ತವ್ಯದ ವೇಳೆ ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಕಾಲಹರಣ ಮಾಡಿರುವ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಗಾಂಧಿ ಆಸ್ಪತ್ರೆಯ ವೈದ್ಯಧಿಕಾರಿ ಡಾ.ಜಯಕೃಷ್ಣ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos