ಟಿಕ್‌ಟಾಕ್ ಇನ್‌ಸ್ಪೆಕ್ಟರ್ ಮುಖವಾಡ ಬಯಲು!

  • In State
  • December 20, 2020
  • 180 Views
ಟಿಕ್‌ಟಾಕ್ ಇನ್‌ಸ್ಪೆಕ್ಟರ್ ಮುಖವಾಡ ಬಯಲು!

ಬೆಂಗಳೂರು: ಟಿಕ್ ಟಾಕ್ ವಿಡಿಯೋ ಮಾಡಿ ಜನಪ್ರಿಯವಾಗಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಅವಾಚ್ಯ ಪದಗಳಿಂದ ನಿಂದಿಸಿ ಪೌರ ಕಾರ್ಮಿಕರ ಮೇಲೆ ದರ್ಪ ತೋರಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಇನ್ಸ್ಪೆಕ್ಟರ್ ದುಂಡಾವರ್ತನೆಯ ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಮಾಗಡಿ ರಸ್ತೆ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಆನಂದ ಮತ್ತು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪೌರ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾದವರು. ನಟ ಡಾ. ರಾಜ್ ಕುಮಾರ್ ಅವರ ಹಾಡುಗಳ ಬಗ್ಗೆ ಟಿಕ್ ಟಾಕ್ ಮಾಡಿದ್ದ ಮಾಗಡಿ ರಸ್ತೆ ಸಂಚಾರ ಠಾಣೆ ಇನ್ಸ್ ಪೆಕ್ಟರ್ ಆನಂದ್ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಪೊಲೀಸ್ ಸಿಬ್ಬಂದಿ ಮೆಚ್ಚಿಕೊಂಡು ಎರಡು ದಿನದ ಹಿಂದಷ್ಟೇ ಆನಂದ್ ಅವರಿಂದ ಹಾಡು ಹಾಡಿಸಲಾಗಿತ್ತು! ಆದರೆ ಈಗ ರಸ್ತೆ ಬದಿ ನಿಲ್ಲಿಸಿದ್ದ ಬಿಬಿಎಂಪಿ ಕಸದ ಆಟೋ ನಿಲ್ಲಿಸಿದ್ದ ಕಾರ್ಮಿಕರ ಮೇಲೆ ದೌರ್ಜನ್ಯವೆಸಗಿ ತನ್ನ ನಿಜವಾದ ಮುಖ ತೋರಿಸಿದ್ದಾರೆ. ಇನ್‌ಸ್ಪೆಕ್ಟರ್ ಆನಂದ್ ರಸ್ತೆಯಲ್ಲಿಯೇ ರೌದ್ರಾವತಾರ ತಾಳಿದ್ದನ್ನು ನೋಡಿದ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ.
ಮಾಗಡಿ ರಸ್ತೆಯ ರಾಯಪುರ ವಾರ್ಡ್ ಸಮೀಪ ರಸ್ತೆ ಬದಿ ಕಸ ತುಂಬಿದ್ದ ಆಟೋ ನಿಲ್ಲಿಸಲಾಗಿತ್ತು. ಅಲ್ಲಿಗೆ ಬರುವ ಸಬ್ ಇನ್‌ಸ್ಪೆಕ್ಟರ್ ಹಾಗೂ ಇನ್‌ಸ್ಪೆಕ್ಟರ್, ನೋ ಪಾರ್ಕಿಂಗ್ ಮಾಡಿದ್ದ ವಾಹನಗಳಿಗೆ ದಂಡ ವಿಧಿಸಿ ಅವನ್ನು ತೆರವುಗೊಳಿಸಿ ಕ್ರಮ ಜರುಗಿಸಬೇಕಿತ್ತು. ಆದರೆ, ಬೀದಿಗೆ ಇಳಿದಿದ್ದೇ ಇನ್‌ಸ್ಪೆಕ್ಟರ್ ಪೊಲೀಸ್ ಸಮುದಾಯವೇ ತಲೆ ತಗ್ಗಿಸುವಂತಹ ಪದಗಳನ್ನು ಬಳಸಿ ಪೌರ ಕಾರ್ಮಿಕರನ್ನು ನಿಂದಿಸಿದ್ದಾರೆ. ಬೋ ಮಗನೇ..ಸೂ.. ಮಗನೇ.. ಲೋ ಬಾಲ್… ಎಂಬ ಪದ ಬಳಸಿದ್ದಾರೆ.
ಮೊದಲು ಪೌರ ಕಾರ್ಮಿಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಮಾತಿನ ಚಕಮಕಿ ನಡೆಯುತ್ತದೆ. ಇದನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಮತ್ತೊಂದು ಘಟನೆಯಲ್ಲಿ ನಿಮ್ಮ ಅಪ್ಪನದಾ ಈ ರಸ್ತೆ , ಒಳಗೆ ಪಾರ್ಕಿಂಗ್ ಮಾಡು. ಸೂ.. ಮಕ್ಕಳಾ ಎಂದು ಜೋರು ಧ್ವನಿಯಲ್ಲಿ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.
ಅಲ್ಲದೇ ರಸ್ತೆ ಬದಿ ನಿಲ್ಲಿಸಿದ್ದ ವಾಹನವನ್ನು ಇನ್‌ಸ್ಪೆಕ್ಟರ್ ಸ್ವತಃ ತಳ್ಳಿ ಬೀಳಿಸುವ ಮೂಲಕ ತನ್ನ ಅಸಲಿತನವನ್ನು ತೋರಿಸಿದ್ದಾರೆ. ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಮಾಗಡಿ ರಸ್ತೆ ಪೊಲೀಸ್ ಇನ್‌ಸ್ಪೆಕ್ಟರ್ ಆನಂದ್ ಮತ್ತು ಪೊಲೀಸ್ ಸಿಬ್ಬಂದಿ ವಿರುದ್ದ ಬಿಬಿಎಂಪಿ ಜಂಟಿ ಪೊಲೀಸ್ ಆಯುಕ್ತರಿಗೆ ದಲಿತ ಸಂಘರ್ಷ ಸಮಿತಿ ದೂರು ಸಲ್ಲಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos