ಟಿಕ್ ಟಾಕ್ : ಕಳ್ಳರ ಬಂಧನ

ಟಿಕ್ ಟಾಕ್ : ಕಳ್ಳರ ಬಂಧನ

ಬೆಳಗಾವಿ, ಸೆ. 28 : ಟಿಕ್ ಟಾಕ್ ಮಾಡಲು ಕಳ್ಳನತಕ್ಕೆ ಇಳಿದಿದ್ದ ಮೂವರು ವಿದ್ಯಾರ್ಥಿಗಳನ್ನು ನಗರದ ಮಾಳ ಮಾರುತಿ ಪೊಲೀಸರು ಬಂಧಿಸಿದ್ದು, 1.65 ಲಕ್ಷ ರೂ. ಮೌಲ್ಯದ 54 ಗ್ರಾಂ ಬಂಗಾರ, ಬೈಕ್, ಕ್ಯಾಮರಾ, ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂತೋಷ ಪಮ್ಮಾರ್, ಸಂಪ ಪಮ್ಮಾರ್ ಸೇರಿ ಓರ್ವ ಅಪ್ತಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಟೀಕ್ ಟಾಕ್ ಗೀಳುಹಚ್ಚಿಕೊಂಡಿದ್ದ ವಿದ್ಯಾರ್ಥಿಗಳು ಕ್ಯಾಮರಾ, ಲ್ಯಾಪ್ ಟಾಪ್ ಕಳ್ಳತನ ಮಾಡುವ ದಾರಿ ಹಿಡಿದಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಕಾಕತಿ, ಮಾರಿಹಾಳ, ಎಪಿಎಂಸಿ ಹಾಗೂ ಮಾಳ ಮಾರುತಿ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ 7 ಪ್ರಕರಣಗಳು ತನಿಖೆ ವೇಳೆ ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos