ಸೂಟು ಬೂಟಿನವರಿಗೆ ಹೊರತು ಪಡಿಸಿ ಶ್ರಮಿಕರಿಗೆ ಟಿಕೆಟ್ ನೀಡಿ

ಸೂಟು ಬೂಟಿನವರಿಗೆ ಹೊರತು ಪಡಿಸಿ ಶ್ರಮಿಕರಿಗೆ ಟಿಕೆಟ್ ನೀಡಿ

ಕೆ.ಆರ್.ಪುರ, ಅ. 21: ಮುಂಬರುವ ಕೆ.ಆರ್.ಪುರ ಉಪಚುನಾವಣೆಗಯಲ್ಲಿ ಪ್ರಭಾವಿ ನಾಯಕರಿಗೆ ಮನೆ ಹಾಕದೆ ಸಾಮಾನ್ಯ ಕಾರ್ಯಕರ್ತರಿಗೆ ಉಪ ಚುನಾವಣೆಯ ಟಿಕೆಟ್ ನೀಡುವಂತೆ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ಕೋರಿದರು.

ಕೆ.ಆರ್.ಪುರ ಸಂತೆಯಿಂದ ಕೆ.ಪಿ.ಸಿ.ಸಿ ಕಚೇರಿ ವರೆಗೆ 101 ಜನರು ಕಾಂಗ್ರೆಸ್ ಆಕಾಂಕ್ಷೆಗಳು ವಿಭಿನ್ನವಾದ ಕಾಲ್ನಡಿಗೆ ಜಾಥ ನಡೆಸಿದರು.

ಈ ಕಾಲ್ ನಡಿಗೆ ಜಾತಕ್ಕೆ ನೇತೃತ್ವ ವಹಿಸಿ ನಂತರ ಮಾತನಾಡಿದ ಎಲೆ ಶ್ರೀನಿವಾಸ್,  ಪ್ರತಿಬಾರಿಯೂ ಪ್ರಭಾವಿ ವ್ಯಕ್ತಿಗಳಿಗೆ ಟಿಕೆಟ್ ನೀಡುವುದರಿಂದ ಸಾಮಾನ್ಯ ಕಾರ್ಯಕರ್ತರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದರು.

ಕೆ.ಆರ್‌.ಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ 101 ಜನ ಸಂತೆ ಮಕ್ಕಳು ಅರ್ಜಿ ಸಲ್ಲಿಸಿ ಇವರ ಪೈಕಿ ಒಬ್ಬರಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ತಮ್ಮ ಸ್ವಾರ್ಥಕ್ಕೋಸ್ಕರವಾಗಿ ರಾಜೀನಾಮೆ ನೀಡಿದ ಜನ ಪ್ರತಿನಿಧಿಗಳ ವಿರುಪದ್ದವಾಗಿ ಸಾಮಾನ್ಯ ಕಾರ್ಯಕರ್ತರನ್ನು ಕಣಕ್ಕಿಳಿಸುವಂತೆ ಕೆಪಿಸಿಸಿ ಅಧ್ಯಕ್ಷರನ್ನು ಮನವಿ ಮಾಡುವುದೇ ನಮ್ಮ ಉದ್ದೇಶವಾಗಿದೆ ಪ್ರತಿ ಬಾರಿಯೂ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಪ್ರಭಾವಿ ನಾಯಕರಿಗೆ ಮನೆ ಹಾಕಿದರೆ ಪಕ್ಷದ ಸಿದ್ದಾಂತಗಳು ಅವನತಿಗೆ ಕಾರಣವಾಗುತ್ತದೆ ಎಂದು ಮನವಿ ಮಾಡಿದರು.

ಸೂಟು ಬೂಟಿನವರಿಗೆ ಹೊರತು ಪಡಿಸಿ ಶ್ರಮಿಕರಿಗೆ ಟಿಕೆಟ್ ನೀಡುವಂತೆ ವರಿಷ್ಟರ ಮೇಲೆ ಒತ್ತಡ ಹೇರುವ ವಿಭಿನ್ನ ಪ್ರಯತ್ನ ಮಾಡಲಾಗುತ್ತದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos