ಟಿಕ್ ಟಾಕ್ : ಕೆರೆಯಲ್ಲಿ ಯುವಕ ಸಾವು

ಟಿಕ್ ಟಾಕ್ : ಕೆರೆಯಲ್ಲಿ ಯುವಕ ಸಾವು

ಹೈದರಾಬಾದ್ , ಜು. 12 : ಟಿಕ್ಟಾಕ್ ನಿಂದ ಈಗಾಗಲೇ ಅನೇಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಯುವಕನೊಬ್ಬ ಕೆರೆಯಲ್ಲಿ ನಿಂತು ಟಿಕ್ಟಾಕ್ ಹಿನ್ನಲೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೈದರಾಬಾದ್ ಮೇಡ್ಚಲ್ ಜಿಲ್ಲೆಯ ದುಲಪಲ್ಲಿ ಕೆರೆಯಲ್ಲಿ ನಡೆದಿದೆ.
ನರಸಿಂಹ(24) ಮೃತ ಯುವಕ. ನರಸಿಂಹ ತನ್ನ ಸ್ನೇಹಿತ ಪ್ರಶಾಂತ್ನೊಂದಿಗೆ ದುಲಪಲ್ಲಿ ಕೆರೆಗೆ ಈಜಲು ಹೋಗಿ ನಂತರ ಇಬ್ಬರು ಟಿಕ್ಟಾಕ್ ವಿಡಿಯೋಗೆ ಪೋಸ್ ನೀಡಲು ಕೆರೆಗೆ ಇಳಿದ್ದರು. ನೀರಿನಲ್ಲಿ ನಿಂತು ನರಸಿಂಹ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದನು. ಈ ವೇಳೆ ನರಸಿಂಹ ಪ್ರಶಾಂತ್ನಿಂದ ದೂರ ಹೋಗಿ ವಿಡಿಯೋಗೆ ಪೋಸ್ ನೀಡಿದ್ದಾನೆ. ಆಕಸ್ಮಿಕ ನೀರು ಆಳವಾಗಿದ್ದ ಸ್ಥಳದಲ್ಲಿ ಜಾರಿ ಬಿದ್ದಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾನೆ.
ತಕ್ಷಣ ಪ್ರಶಾಂತ್ ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಆದರೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ನರಸಿಂಹನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಬಂದು ಮೃತದೇಹ ಮೇಲೆತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos