ಥೈರಾಯ್ಡ್  ಸಮಸ್ಯೆ ನಿವಾರ್ಣೆಗೆ ಈ ಪರ್ದಾಥಗಳು ಉತ್ತಮ!

ಥೈರಾಯ್ಡ್  ಸಮಸ್ಯೆ ನಿವಾರ್ಣೆಗೆ ಈ ಪರ್ದಾಥಗಳು ಉತ್ತಮ!

ಬೆಂಗಳೂರು: ಇತ್ತೀಚಿನ ಜೀವನದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು  ಬಹಳ ಬಹುದೊಡ್ಡ ಸಮಸ್ಯೆಯಾಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಈಗಿನ ಕಾಲದಲ್ಲಿ ಯಾರ ಹತ್ತಿರ ಮಾತನಾಡಿದರೂ ಈ ಕಾಯಿಲೆ ಇದೆ, ಆ ಕಾಯಿಲೆ ಇದೆ ಎಂದು ಹೇಳುತ್ತಲೇ ಇರುತ್ತಾರೆ. ಆ ಮಟ್ಟಿಗೆ ಕಾಲ ಬದಲಾಗಿದೆ. ಆ ರೋಗಗಳಲ್ಲಿ ಥೈರಾಯ್ಡ್‌ ಕೂಡ ಒಂದು.. ಇದೀಗ ಈ ಕಾಯಿಲೆಯ ನಿವಾರಣೆಗೆ ನೈಸರ್ಗಿಕ ಮನೆಮದ್ದುಗಳನ್ನು ನೋಡೋಣ..

ದೊಡ್ಡ ನೆಲ್ಲಿಕಾಯಿ: ನೆಲ್ಲಿಕಾಯಿ ಜ್ಯೂಸ್ ಕುಡಿಯುವುದು ಅಥವಾ ನೆಲ್ಲಿಕಾಯಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ತುಂಬಾ ಒಳ್ಳೆಯದು. ಇದು ಥೈರಾಯ್ಡ್ ಸಮಸ್ಯೆ ಮಾತ್ರವಲ್ಲದೆ ಇತರ ಆರೋಗ್ಯ ಸಮಸ್ಯೆಗಳನ್ನೂ ತಡೆಯುತ್ತದೆ.

ತೆಂಗಿನಕಾಯಿ: ತೆಂಗಿನಕಾಯಿ ಅಥವಾ ತೆಂಗಿನ ಎಣ್ಣೆಯಿಂದ ತಯಾರಿಸಿದ ಆಹಾರ ಉತ್ಪನ್ನಗಳು ಥೈರಾಯ್ಡ್ ಪೀಡಿತರಿಗೆ ಉತ್ತಮ ಆಹಾರ ಎಂದು ಹೇಳಬಹುದು. ತೆಂಗಿನಕಾಯಿ ತಿನ್ನುವುದರಿಂದ ಥೈರಾಯ್ಡ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

ಕುಂಬಳಕಾಯಿ ಬೀಜಗಳು: ಕುಂಬಳಕಾಯಿ ಬೀಜಗಳು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದರಲ್ಲಿ ಸತುವು ಸಮೃದ್ಧವಾಗಿದ್ದು…ಜೀವಸತ್ವಗಳು ಮತ್ತು ಖನಿಜಗಳಂತಹ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಕುಂಬಳಕಾಯಿ ಬೀಜಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಥೈರಾಯ್ಡ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

ಫ್ರೆಶ್ ನ್ಯೂಸ್

Latest Posts

Featured Videos