ಏಡಿ ರುಚಿ ಸವಿದವರಿಗೇ ಗೊತ್ತು.

ಬೆಂಗಳೂರು, ನ. 5 : ಏಡಿಯ ರುಚಿ ಏನೆಂಬುದು ಸವಿದವರಿಗೇ ಗೊತ್ತು. ಏಡಿ… ಮಾಂಸಹಾರಿಗಳ ಕಿವಿ ನೆಟ್ಟಗಾಗುತ್ತದೆ. ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಗದ್ದೆಯ ಬದಿಯಲ್ಲಿ ಕಾಣಸಿಗುವ ಏಡಿಗಳ ಟೇಸ್ಟ್ ಸಮುದ್ರದ ಏಡಿಗಳಿಗಿಂದ ಸ್ವಲ್ಪ ಜಾಸ್ತಿ ಮತ್ತು ಡಿಫ್ರೆಂಟ್. ಒಂದಷ್ಟು ಬಣ್ಣ, ಒಂದಷ್ಟು ಗಾತ್ರದಲ್ಲಿ ಏಡಿಗಳು ಕಾಣಸಿಗುತ್ತವೆ.
ಆದರೆ, ಇವುಗಳ ದೇಹ ರಚನೆ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಟ್ವಿಟ್ಟರಿನಲ್ಲಿ ಒಂದು ಏಡಿಯ ವಿಡಿಯೋ ಸಖತ್ ಕುತೂಹಲ ಕೆರಳಿಸಿದೆ. ಏಡಿಯ ಗಾತ್ರ ಮತ್ತು ಕತ್ತರಿಯಂತಹ ಕೊಂಡಿ ಈಗ ಅಚ್ಚರಿ ಮೂಡಿಸಿವೆ.
ಏಡಿಯ ಗಾತ್ರ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಏಡಿ ಇಷ್ಟು ದೊಡ್ಡದಾಗುತ್ತಾ ಎಂದು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ, ಕತ್ತರಿಯಂತಹ ಕೊಂಡಿಯೊಳಗೆ ಮನುಷ್ಯನ ಹಲ್ಲಿನ ರೀತಿಯ ರಚನೆ ಇದೆ. ಇದು ಎಲ್ಲರ ಕುತೂಹಲ ಕೆರಳಿಸಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos