ಮುಳ್ಳಿನ ಮೇಲೆ ಜಿಗಿದು ಭಕ್ತರು ಸಮರ್ಪಣೆ

ಮುಳ್ಳಿನ ಮೇಲೆ ಜಿಗಿದು ಭಕ್ತರು ಸಮರ್ಪಣೆ

ಕೊಪ್ಪಳ, ಡಿ. 1 : ತಾಲೂಕಿನ ಲೇಬಗೇರಿ ಗ್ರಾಮದ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವದ ನಿಮಿತ್ತ ಭಕ್ತರು ಮುಳ್ಳಿನ ಮೇಲೆ ಜಿಗಿದು ಭಕ್ತಿ ಸಮರ್ಪಿಸಿದರು. ನ. 30, 2019 ರಂದು ಶನಿವಾರ ಕಾರ್ತಿಕೋತ್ಸವದ ನಿಮಿತ್ತ ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಮುಳ್ಳಿನ ರಾಶಿಯಲ್ಲಿ ಭಕ್ತರು ಜಿಗಿದು ದೇಹ ದಂಡನೆ ಮಾಡಿಕೊಳ್ಳುವುದರ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು. ಇಷ್ಟಾರ್ಥಗಳನ್ನು ನೆರವೇರಿಸಿದರೆ ಮುಳ್ಳಿನ ಬೇಲಿಯಲ್ಲಿ ಜಿಗಿಯುವುದಾಗಿ ಸ್ಥಳೀಯ ಭಕ್ತರು ಹರಕೆ ಹೊತ್ತಿರುತ್ತಾರೆ. ನಂತರ ಹರಕೆ ಈಡೇರಿದ ಬಳಿಕ ಭಕ್ತರು ಮುಳ್ಳಿನ ಬೇಲಿಯಲ್ಲಿ ಜಿಗಿದು ಭಕ್ತಿ ಸಮರ್ಪಿಸುತ್ತಾರೆ. ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ಪ್ರತಿ ವರ್ಷ ಈ ರೀತಿ ವಿಶಿಷ್ಟವಾಗಿ ಜಾತ್ರೆ ನಡೆಯುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos