ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಈ ನಟಿ..!

ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಈ ನಟಿ..!

ನ. 25 : 30 ವರ್ಷಗಳ ಹಿಂದೆ ಪ್ರತಿ ಭಾನುವಾರ ಟಿವಿಯಲ್ಲಿ ಪ್ರಸಾರವಾಗ್ತಿದ್ದ ಮಹಾಭಾರತ ಧಾರಾವಾಹಿ ಎಲ್ಲರ ಮನಸ್ಸು ಗೆದ್ದಿತ್ತು. ಪ್ರತಿಯೊಬ್ಬರು ಈ ಧಾರಾವಾಹಿಯಲ್ಲಿ ಬರುವ ಪಾತ್ರಗಳನ್ನು ಇಷ್ಟಪಡ್ತಿದ್ದರು.
ಮಹಾಭಾರತದಲ್ಲಿ ದ್ರೌಪದಿ ಪಾತ್ರವನ್ನು ಮಾಡಿದ್ದ ರೂಪಾ ಗಂಗೂಲಿ ಇಂದು 53ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ರೂಪಾ ಗಂಗೂಲಿ, ನವೆಂಬರ್ 25,1966 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ್ರು. ಬಂಗಾಳಿ ಧಾರಾವಾಹಿ ಮೂಲಕ ಉದ್ಯಮಕ್ಕೆ ಬಂದ ರೂಪಾ ಗಂಗೂಲಿ, ಸಾಕಷ್ಟು ಹೆಸರು ಮಾಡಿದ್ದರು.
ಸಂದರ್ಶವೊಂದರಲ್ಲಿ ಮಾತನಾಡಿದ್ದ ರೂಪಾ ಗಂಗೂಲಿ, ಮಹಾಭಾರತದ ನಂತ್ರ ಅವ್ರ ಜೀವನ ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದರು. ಧಾರಾವಾಹಿ ನಂತ್ರ ಸಾಕಷ್ಟು ಸಮಸ್ಯೆ ಎದುರಿಸಬೇಕಾಯ್ತು. ಆದ್ರೆ ನಾನು ಎಂದಿಗೂ ಕೆಲಸಕ್ಕೆ ಬೇರೆಯವರ ಮುಂದೆ ಕೈಚಾಚಿಲ್ಲವೆಂದು ರೂಪಾ ಗಂಗೂಲಿ ಹೇಳಿದ್ದಾರೆ. ರೂಪಾ 1992 ರಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಧುಬ್ ಮುಖರ್ಜಿ ಅವರನ್ನು ವಿವಾಹವಾಗಿದ್ದರು. 14 ವರ್ಷಗಳ ನಂತರ ಅವರು 2007 ರಲ್ಲಿ ಬೇರೆಯಾದ್ರು. ಜನವರಿ 2009 ರಲ್ಲಿ ವಿಚ್ಛೇದನ ಪಡೆದ್ರು. ದೈನಂದಿನ ಜಗಳಗಳಿಂದ ಬೇಸರಗೊಂಡಿದ್ದೆ ಎಂದು ರೂಪಾ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos