ಈ ಹಣ್ಣುಗಳು ಆರೋಗ್ಯಕ್ಕೆ ಬಲು ಪೂರಕ

ಈ ಹಣ್ಣುಗಳು ಆರೋಗ್ಯಕ್ಕೆ ಬಲು ಪೂರಕ

ಬೆಂಗಳೂರು, ಸೆ. 18: ಹಣ್ಣು ಅಂದ ತಕ್ಷಣ ನಮಗೆ ಮೊದಲಿಗೆ ನೆನಪಾಗುವುದೇ ಸೇಬು, ಕಿತ್ತಾಳೆ, ದ್ರಾಕ್ಷಿ, ದಾಳಿಂಬೆ ನೆನಪಿಗೆ ಬರುತ್ತವೆ. ಹೌದು, ಆದರೆ ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಸಿಗುವ ಕೆಲವೊಂದು ಹಣ್ಣುಗಳು ಸಾಮಾನ್ಯವಾಗಿ ನಗರಿಗರಿಗೆ ಪರಿಚಿತವಿರುವುದಿಲ್ಲ. ಜೊತೆಗೆ ಅವುಗಳಲ್ಲಿರುವ ರುಚಿ ಮತ್ತು ಆರೋಗ್ಯ ಪೂರಕ ಅಂಶಗಳಂತೂ ತಿಳಿದಿರುವುದು ಕಡಿಮೆಯೇ.

ಕೆಲವು ಹಣ್ಣುಗಳು ಬೇಸಿಗೆಯಲ್ಲಿ ಬಿಟ್ಟರೆ, ಇನ್ನೂ ಕೆಲವು ಹಣ್ಣುಗಳು ಮಳೆಗಾಲ, ಚಳಿಗಾಲದಲ್ಲಿ ಬಿಡುತ್ತವೆ. ಬೇಸಿಗೆಯಲ್ಲಿ ನೇರಳೆ, ಸಂಪಿಗೆ, ಹುಲಿಗೆ, ಬೀಮರ್ಲು, ನೆಕ್ಕರಿಕೆ, ಹೆಬ್ಬಲಸು, ರೆಂಜಲು,  ಮುಳ್ಳಣ್ಣು, ಜೀಕರ್ಲು, ಕವಳಿ ಸೀಸನ್, ಇವು ಹೆಚ್ಚಾಗಿ ಮಲೆನಾಡಿನ ಕಾಡುಗಳಲ್ಲಿ ಕಂಡುಬರುವುದರಿಂದ ಇವು ಸಾಮಾನ್ಯವಾಗಿ ಮಲೆನಾಡಿಗರಿಗೆ ಚಿರಪರಿಚಿತವಾಗಿರುತ್ತವೆ.

ಇನ್ನೂ ಮಳೆಗಾಲದಲ್ಲಿ ಮಳೆ ನೇರಳೆ, ಕಾಡುಕರ್ಜೂರ, ಕಾಡು ಕಿತ್ತಳೆ, ಪೆನ್ನೇರಳೆ, ಬೆತ್ತದ ಹಣ್ಣು, ಸಕ್ಕರೆ ಹಣ್ಣು, ಹೀಗೆ ಇನ್ನೂ ಇತರ ಹಣ್ಣುಗಳು ಬಿಡುವ ಸೀಸನ್ನಾಗಿದೆ. ಮೊದಲಿಗೆ ಮಾನವ ಗೆಡ್ಡೆಗೆಣಸುಗಳನ್ನ ತಿಂದು ಜೀವನ ನಡೆಸುತ್ತಿದ್ದ, ಅಂದರೆ ನಮ್ಮ ಆದಿ ಮಾನವರಿಗೆ ಕಾಡುಹಣ್ಣುಗಳನ್ನ ತಿಂದೇ ಜೀವನ ನಡೆಸುತ್ತಿದ್ದರು.

ಆದರೆ ಈಗಿನ ಕಾಲದಲ್ಲಿ ಕಾಡಿನಲ್ಲಿ ಬೆಳೆಯುವಂತಹ ಹಣ್ಣುಗಳ ಬಗ್ಗೆ ತಿಳಿದಿರುವವರ ಸಂಖ್ಯೆ ಕಡಿಮೆ. ಇವುಗಳ ಬಗ್ಗೆ  ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿರುವ ಆದಿವಾಸಿ ಜನಾಂಗದವರಿಗೆ ತಿಳಿದಿರುತ್ತದೆ.

ಈ ಹಣ್ಣಗಳು ಸಾಮಾನ್ಯವಾಗಿ ರುಚಿಕರದ ಜೊತಗೆ ಜೀವಸತ್ವ, ಶರ್ಕರಪಿಷ್ಟ, ಖನಿಜಾಂಶ ಸೇರಿದಂತೆ ಆರೋಗ್ಯಕ್ಕೆ ಪೂರಕವಾದ ಅನೇಕ ಅಂಶಗಳನ್ನ ಅಡಗಿಸಿಕೊಂಡಿರುತ್ತೆ. ಇನ್ನೂ ಕೆಲವೊಂದು ಖಾಯಿಲೆಗೆ ಮದ್ದಾಗಿಯೂ ಕಾರ್ಯನಿರ್ವಹಿಸುತ್ತ

ವೆ. ಬೆಟ್ಟದ ನಲ್ಲಿಕಾಯಿ ಮದುಮೇಹಕ್ಕೆ ಮದ್ದಾಗಿದೆ, ರಕ್ತದೊತ್ತಡಕ್ಕೆ ನೇರಳೆ ಹಣ್ಣು ಮದ್ದಾಗಿದೆ, ರಕ್ತಭೇದಿಯ ನಿಯಂತ್ರಕ್ಕೆ ಸಕ್ಕರೆಕಂಚಿ, ಸಂಪೆ ಹಣ್ಣು ಮೂಳೆಮುರಿತಕ್ಕೆ ಮದ್ದಾಗಿರುತ್ತೆ. ಹೀಗೆ ಇನ್ನೂ ಇತರ ಹೆಚ್ಚು ಪೋಷಕಾಂಶಯುಳ್ಳ ಹಣ್ಣುಗಳು ಪಶ್ಚಿಮಘಟ್ಟದ ಅರಣ್ಯಗಳಲ್ಲಿ ಕಂಡುಬರುತ್ತವೆ.

ಸಹಜವಾಗಿ ಕಾಡಿನ ಪ್ರಾಣಿಪಕ್ಷಿಗಳ ಸಂಕುಲಕ್ಕೆ ಈ ಹಣ್ಣುಗಳೇ ಆಹಾರ. ಇತ್ತ ಇದೀಗಾ ಕಾಡಿನ ಪ್ರಾಣಿಪಕ್ಷಿಗಳ ಸಂಕುಲ ಹೇಗೆ ದಿನೇ-ದಿನೇ ನಶಿಸಿ ಹೋಗುತ್ತಿದೆಯೋ ಹಾಗೆಯೇ ಕಾಡುಹಣ್ಣುಗಳು ಕೂಡ ನಶಿಸಿ ಹೋಗುತ್ತಿವೆ.  ಈ ನಿಟ್ಟಿನಲ್ಲಿ ಜೀವವೈವಿಧ್ಯತೆಯನ್ನ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯೂ ಹೌದು. ಇದರ ಜೊತೆಗೆ ಗೊತ್ತಿಲ್ಲದ ಇಂತಹ ಇನ್ನೂ ಹಲವು ರೀತಿಯ ಹಣ್ಣುಗಳ ಬಗ್ಗೆ ತಿಳಿದುಕೊಳ್ಳುವತ್ತ ಈಗಿನ ಯುವಜನಾಂಗ ಮುಂದಾಗ ಬೇಕಿದೆ. ಇಂದರಿಂದ ಈಗಿನಾ ಆಧುನಿಕ ಸಮಾಜದಲ್ಲಿಯು ಈ ಹಣ್ಣುಗಳು ಪರಿಚಯಿಸಲ್ಪಡುತ್ತವೆ.

ಫ್ರೆಶ್ ನ್ಯೂಸ್

Latest Posts

Featured Videos