ಬ್ರಿಟನ್ ಪ್ರಧಾನಿ ‘ಥೆರೇಸಾ ಮೇ’ ರಾಜೀನಾಮೆ ಘೋಷಣೆ..!

ಬ್ರಿಟನ್ ಪ್ರಧಾನಿ ‘ಥೆರೇಸಾ ಮೇ’ ರಾಜೀನಾಮೆ ಘೋಷಣೆ..!

ಲಂಡನ್, ಮೇ. 24, ನ್ಯೂಸ್‍ ಎಕ್ಸ್ ಪ್ರೆಸ್‍: ಬ್ರೆಕ್ಸಿಟ್ ಒತ್ತಡದ ಕಾರಣದಿಂದಾಗಿ ಬ್ರಿಟನ್ ಪ್ರಧಾನಿ ಥೆರೇಸಾ ಮೇ ರಾಜೀನಾಮೆ ಘೋಷಣೆ ಮಾಡಿದ್ದು, ಜೂನ್.7 ಕ್ಕೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಕನ್ಸರ್ವೆಟೀವ್ ಪಕ್ಷದ ನಾಯಕಿಯ ಸ್ಥಾನಕ್ಕೆ ಥೆರೇಸಾ ಮೇ ರಾಜೀನಾಮೆ ಘೋಷಿಸಿದ್ದು, ಬ್ರಿಟನ್ ನ ಹಂಗಾಮಿ ಪ್ರಧಾನಿಯಾಗಿ ಮೇ ಮುಂದುವರೆಯಲಿದ್ದಾರೆ. ಮೇ ರಾಜೀನಾಮೆ ಹಿನ್ನೆಲೆಯಲ್ಲಿ ಯಾವುದೆ ಚುನಾವಣೆ ಇಲ್ಲದೇ ಇನ್ನು ಕೆಲವೇ ವಾರಗಳಲ್ಲಿ ಯುಕೆ ಕನ್ಸರ್ವೆಟೀವ್ ಪಕ್ಷದ ಮತ್ತೋರ್ವ ನಾಯಕ ಬ್ರಿಟನ್ ಪ್ರಧಾನಿ ಹುದ್ದೆಗೆ ನೇಮಕಗೊಳ್ಳಲಿದ್ದಾರೆ.

ಬ್ರೆಕ್ಸಿಟ್ ಪ್ರಕಾರ ಬ್ರಿಟನ್ ನ್ನು ಯುರೋಪಿಯನ್ ಯೂನಿಯನ್ ನಿಂದ ನಿಗದಿತ ಸಮಯಕ್ಕೆ ಹೊರತರುವುದರಲ್ಲಿ ವಿಫಲರಾಗಿದ್ದಾರೆ ಎಂದು ಅವರದ್ದೇ ಪಕ್ಷದ ನಾಯಕರ ಅಸಮಾಧಾನಕ್ಕೆ ಥೆರೇಸಾ ಮೇ ಗುರಿಯಾಗಿದ್ದರು. ಈ ಒತ್ತಡದ ಪರಿಣಾಮ  ಥೆರೇಸಾ ಮೇ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಬ್ರಿಟನ್ ಪ್ರಧಾನಿ ಹುದ್ದೆಗೆ, ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ಬ್ರೆಕ್ಸಿಟ್ ನ ಬಲವಾದ ಸಮರ್ಥಕ ಬೊರಿಸ್ ಜಾನ್ಸನ್ ನೇಮಕವಾಗುವ ಸಾಧ್ಯತೆಗಳಿವೆ. 2016 ರಲ್ಲಿ ಥೆರೇಸಾ ಮೇ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos