ಆಯ್ಕೊಂಡ್ ತಿನ್ನೋದಕ್ಕೂ ಇಲ್ಲ?

ಆಯ್ಕೊಂಡ್ ತಿನ್ನೋದಕ್ಕೂ ಇಲ್ಲ?

ಬೆಂಗಳೂರು, ಏ. 11 : ಸೀಲ್ಡೌನ್ ಹಿನ್ನಲೆ ಬೆಂಗಳೂರಿನ ಪಾದರಾಯಧಿನಪುರವನ್ನು ಸುತ್ತಾಡುವಾಗ ಕಣ್ಣಿಗೆ ಕಂಡ ದೃಶ್ಯ ಚಿಂದಿ ಆಯುವುದು. ಬೀದಿಯಲ್ಲೇ ಹುಟ್ಟಿ ಬೀದಿಯಲ್ಲೇ ಬದುಕುತ್ತಿರುವ ಈತ ಐವರು ಮಕ್ಕಳು, ಮಡದಿಯೊಂದಿಗೆ 20 ವರ್ಷಗಳಿಂದ ಬೀದಿಯಲ್ಲೇ ಜೀವನ.
ಸೋಂಕು ಹರಡದಂತೆ ಪದೇಪದೆ ಕೈತೊಳೆಯಬೇಕು, ಸ್ಯಾನಿಟೈಸರ್ ಬಳಸಬೇಕು ಎಂದು ಆರೋಗ್ಯಾಧಿಕಾರಿಗಳು ಪ್ರಚಾರ ಮಾಡುತ್ತಿದ್ದಾರೆ. ಸೋಪು, ಸ್ಯಾನಿಟೈಸರ್, ಬಿಸಿ ನೀರು, ಮಾಸ್ಕ್ ಇವೆಲ್ಲ ಈತನಿಗೆ ಕನ್ನಡಿಯೊಳಗಿನ ಗಂಟು. ಅಂಗೈಯನ್ನೇ ತಟ್ಟೆ ಮಾಡಿಕೊಂಡಿರುವ ಈ ಥರದವರು ಬೆಂಗಳೂರಲ್ಲಿ ಅದೆಷ್ಟಿದ್ದಾರೋ.
ತುಳಸಿ, ಪುದಿನ, ಶುಂಠಿ ಕಷಾಯ ಕುಡಿಯಿರಿ,” ಎಂದು ಆರೋಗ್ಯ ಪರಿಣಿತರು ಸಲಹೆ ನೀಡುತ್ತಿದ್ದಾರೆ. ”ಸೋಂಕು ಹರಡದಂತೆ ಮನೆಯಲ್ಲೇ ಮದ್ದು ಮಾಡಿಕೊಳ್ಳಿ. ಆದರೆ ಅದ್ಯಾವುದೂ ಇವರಿಗೆ ಸಂಬಂಧಪಡದ ಸಂಗತಿ. ಮಕ್ಕಳು ಅಷ್ಟೇ, ಬೀದಿಯಲ್ಲೇ ಆಟವಾಡಿಕೊಂಡು ಖುಷಿಯಿಂದಿದ್ದಾರೆ. ನಿಮಗೆ ಕೆಮ್ಮು, ಶೀತ ಏನಾಧಿದರೂ ಬಂದಿದೆಯೇ ಎಂದು ಪ್ರಶ್ನಿಸಿದರೆ ”ದೇವರು ಇದ್ದಾನೆ ಬಿಡಿ,” ಎಂದು ನಗುತ್ತಾನೆ.

ಬೀದಿ ಬದಿ ವಾಸಿಸುವವರ ಬಗ್ಗೆ ಹೈಕೋರ್ಟ್ ಕೂಡ ಎಚ್ಚರಿಸಿದೆ. ಚಿಂದಿ ಆಯುವವರು, ನಿರ್ಗತಿಕರು, ವಲಸೆ ಕಾರ್ಮಿಕರು ಎಷ್ಟಿದ್ದಾರೆ-ಹೇಗಿದ್ದಾರೆ ಎನ್ನುವ ಮಾಹಿತಿಯೇ ಇಲ್ಲದೆ ಇವರಿಗೆ ಸೋಂಕು ತಗುಲುವುದನ್ನು ಮತ್ತು ಇವರಿಂದ ಇತರರಿಗೆ ಸೋಂಕು ಹರಡುವುದನ್ನು ತಪ್ಪಿಸುವುದು ಹೇಗೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ‘ಸಿಲಿಕಾನ್ ಸಿಟಿ’ಯಲ್ಲಿ 25 ಸಾವಿರಕ್ಕೂ ಅಧಿಕ ಚಿಂದಿ ಆಯುವವರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos