‘ರೈ’ ಇನ್ನಿಲ್ಲ

 ‘ರೈ’ ಇನ್ನಿಲ್ಲ

ಬೆಂಗಳೂರು , ಮೇ. 15 : ದುಷ್ಮನಿಯನ್ನು ಕಂಡರೆ ಸಾಕು ಎಲ್ಲೆಂದರಲ್ಲಿ ಯಾವುದೇ ಯೋಜನೆ ಇಲ್ಲದೆ ಯುದ್ಧಕ್ಕೇ ಮುಂದಾಗುತ್ತಿದ್ದ  ಹೇಗೆ ಹೊಂಚು ಹಾಕಬೇಕು? ಎಂದು ಲೆಕ್ಕಾಚಾರ ಹಾಕುವ ಕಲೆಯನ್ನು ಕಲಿತ ಮೊದಲ ವ್ಯಕ್ತಿ ಮುತ್ತಪ್ಪ ರೈ. ಇದೇ ಕಾರಣಕ್ಕೆ ಆತನಿಗೆ Master Mind Killer ಎಂಬ ಹೆಸರು  ಬಂತ್ತು.  ಆ ನಂತರ ಸರಣಿ ಕೊಲೆಗಳು. ಬೆಂಗಳೂರಿನ ಮೊದಲ ಡಾನ್ ಜಯರಾಜ್ ಕೊಲೆ.  ರಾಜಧಾನಿಯ ರೌಡಿಸಂಗೆ ದುಬೈನಿಂದ ಆಫ್ರಿಕಾ ರಷ್ಯಾ ದೇಶದವರೆಗೆ ಕಾಂಟ್ಯಾಕ್ಟ್ ಬೆಳೆಸಿದ ಮೊದಲ ಡಾನ್ ಮುತ್ತಪ್ಪರೈ.  ಡಾನ್ ಹೆಸರು ಪಡೆಯುತ್ತೇನೆ ಎಂದು ಸ್ವತಃ ಆವರೂ ಎಣಿಸಿರಲಿಕ್ಕಿಲ್ಲವೇನೋ? ಆದರೆ, ಈ ಎಲ್ಲಾ ಪ್ರಶ್ನೆಗಳಿಗೂ  ಮೊದಲ ಡಾನ್ ಜಯರಾಜ್ ಕೊಲೆ.

ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ, ಮಾಜಿ ಭೂಗತ ದೊರೆ ಮುತ್ತಪ್ಪ ರೈ ಗುರುವಾರ ತಡರಾತ್ರಿ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರನ್ನು ತೀವ್ರ ಅನಾರೋಗ್ಯದ ಕಾರಣ ಬೆಂಗಳೂರಿನ ಆಸ್ಪತ್ರೆಗೆ ಎರಡು ದಿನಗಳ‌ ಹಿಂದೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.

ಅಂತ್ಯಕ್ರಿಯೆ :

ಇಂದು ಸಂಜೆ 4 ಗಂಟೆಗೆ ರಾಮನಗರ ತಾಲ್ಲೂಕಿನ  ಬಿಡದಿಯ ಸ್ವಗ್ರಾಮದಲ್ಲಿ ಮುತ್ತಪ್ಪ ರೈ ಅಂತ್ಯಕ್ರಿಯೆ ನಡೆಯಲಿದೆ. ಕೊರೊನಾ ಭೀತಿ  ಹಿನ್ನೆಲೆ ಕೇವಲ ಕುಟುಂಬಸ್ಥರಿಗೆ ಮಾತ್ರ ಅಂತ್ಯಕ್ರಿಯೆ ಭಾಗಿಯಾಗಲು ಅವಕಾಶ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮೂಲದ ತುಳು ಭಾಷಿಕ ಬಂಟ ಸಮುದಾಯದವರು. ನೆಟ್ಟಲ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿಯ ಪುತ್ರ. ಪುತ್ತೂರಿನಲ್ಲಿ ಪದವಿ ಶಿಕ್ಷಣ ಪಡೆದ ಅವರು ಬಳಿಕ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos