ಏಪ್ರಿಲ್​ನಲ್ಲಿ ಪಂಚಾಯತ್ ಚುನಾವಣೆ ಇಲ್ಲ

ಏಪ್ರಿಲ್​ನಲ್ಲಿ ಪಂಚಾಯತ್ ಚುನಾವಣೆ ಇಲ್ಲ

ಬೆಂಗಳೂರು,ಜ.11: ಏಪ್ರಿಲ್ 5 ಮತ್ತು 9ರಂದು ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ ಎಂಬ ಸುದ್ದಿ ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಅದಕ್ಕೆ ಸಂಬಂಧಿಸಿದ ಗೆಜೆಟ್ ನೋಟಿಫಿಕೇಶನ್ ಅನ್ನು ಎಲ್ಲಾ ಗ್ರಾಮ ಪಂಚಾಯತ್​​ಗಳಿಗೂ ಕಳುಹಿಸಿಕೊಡಲಾಗಿತ್ತು. ಆದರೆ, ಇದು ನಕಲಿ ಗೆಜೆಟ್ ನೋಟಿಫಿಕೇಶನ್ ಎಂಬುದು ತಿಳಿದುಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೆಲ ಅಧಿಕಾರಿಗಳು ಈ ನಕಲಿ ನೋಟಿಫಿಕೇಶನ್ ಹಿಂದಿರುವ ಸಾಧ್ಯತೆ ಇದೆ.

ಪಂಚಾಯತ್ ರಾಜ್ ಇಲಾಖೆಯಿಂದ ಅಧಿಕೃತವಾಗಿ ಯಾವುದೇ ನೋಟಿಫಿಕೇಶನ್ ಹೋಗಿಲ್ಲ ಎಂಬುದು ಈಗ ದೃಢಪಟ್ಟಿದೆ. ಈ ನಕಲಿ ಸೂಚನಾಪತ್ರ ಗ್ರಾಮ ಪಂಚಾಯತಿ ಕಚೇರಿಗಳಿಗೆ ಹೋಗಿದ್ದು ಹೇಗೆ ಎಂಬುದು ಈಗ ಪ್ರಶ್ನೆಯಾಗಿದೆ. ಈ ನಕಲಿ ಪತ್ರವನ್ನು ತಯಾರಿಸಿದವರು ಯಾರು ಎಂದು ಇಲಾಖೆಯಲ್ಲಿ ಆಂತರಿಕ ತನಿಖೆ ನಡೆಯುತ್ತಿದೆ.

ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿಲ್ಲ. ಪಂಚಾಯತ್ ರಾಜ್ ಇಲಾಖೆಯಿಂದ ಅಧಿಕೃತವಾಗಿ ಯಾವುದೇ ನೋಟಿಫಿಕೇಶನ್ ಹೋಗಿಲ್ಲ ಎಂಬುದು ದೃಢಪಟ್ಟಿದೆ. ಈ ನಕಲಿ ಸೂಚನಾಪತ್ರ ಗ್ರಾಮ ಪಂಚಾಯತಿ ಕಚೇರಿಗಳಿಗೆ ಹೋಗಿದ್ದು ಹೇಗೆ, ಈ ನಕಲಿ ಪತ್ರವನ್ನು ತಯಾರಿಸಿದವರು ಯಾರು ಎಂದು ಇಲಾಖೆಯಲ್ಲಿ ಆಂತರಿಕ ತನಿಖೆ ನಡೆಯುತ್ತಿದೆ. ಸಚಿವ ಕೆ.ಎಸ್. ಈಶ್ವರಪ್ಪ ಅವರು ಇಂದು ಮಧ್ಯಾಹ್ನ ಸ್ಪಷ್ಟನೆ ನೀಡಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos