ಹಿರಿಯ ಮಕ್ಕಳ ಸಾಹಿತಿ ಕಮ್ಮಾರ ಇನ್ನಿಲ್ಲ

ಹಿರಿಯ ಮಕ್ಕಳ ಸಾಹಿತಿ ಕಮ್ಮಾರ ಇನ್ನಿಲ್ಲ

ಧಾರವಾಡ, ಜ. 21: ಮಕ್ಕಳ ಹಿರಿಯ ಸಾಹಿತಿ ಈಶ್ವರ ಕಮ್ಮಾರ ಇಂದು ನಸುಕಿನ ಜಾವದಲ್ಲಿ ಹೃಸಯಾ ಘಾತದಿಂದ ನಿಧನರಾದರು.

70 ರ ದಶಕದಲ್ಲಿ ಧಾರವಾಡದ ಹಲವು ಗೆಳೆಯರೊಂದಿಗೆ ಸೇರಿ “ಮಕ್ಕಳ ಮನೆ” ಸಂಸ್ಥೆ ಕಟ್ಟಿ ಆ ಮೂಲಕ ನಾಡಿನ ಯುವ ಬರಹಗಾರರಿಗೆ ಧಾರವಾಡದಲ್ಲಿ ಎಂಟು ದಿನಗಳಕಾಲ ಮಕ್ಕಳ ಸಾಹಿತ್ಯ ಕಮ್ಮಟ ಆಗುವಂತೆ ಶ್ರಮಿಸಿ, ಆ ಮೂಲಕ ಹತ್ತಾರು ಶ್ರೇಷ್ಟ ಮಕ್ಕಳ ಸಾಹಿತಿಗಳಾಗಿ ರೂಪುಗೊಳ್ಳುವಂತೆ ಮಾಡಿದವರು ಕೀರ್ತಿ ಇವರದ್ದು.

“ಮಕ್ಕಳ ಮಂದಿರ” ಮಕ್ಕಳ ಪತ್ರಿಕೆ ಕೆಲವು ವರ್ಷಗಳವರೆಗೆ ನಡೆಸಿದವರು. ಕರ್ನಾಟಕ ವಿಶ್ವವಿ ದ್ಯಾಲಯದಲ್ಲಿ ಪ್ರಸಾರಂಗದಲ್ಲಿ ಬಹುವರ್ಷದವರೆಗೆ ಕಾರ್ಯಮಾಡಿ, ವಿಶ್ವವಿದ್ಯಾಲಯದ ಜನಪ್ರಿಯ ಸಾಹಿತ್ಯವನ್ನು ಹಳ್ಳಿಗಳಿಗೆ ತಲುಪುವಂತೆ ಪ್ರಯತ್ನಿಸಿದವರು.

ಮಕ್ಕಳ ಸಾಹಿತ್ಯ ಕೃತಿಗಳಲ್ಲಿ ತಿಪ್ಪನ ಕನಸು ಕಾದಂಬರಿಯಿಂದ ಹಿಡಿದುಕೊಂಡು ಕಾವ್ಯ, ಕಥೆ, ನಾಟಕಗಳ ಕೃತಿಗಳನ್ನು ನೀಡಿದ್ದಾರೆ. ಇಳಿ ವಯಸ್ಸಿನಲ್ಲೂ ಅತ್ಯಂತ ಉತ್ಸುಕರಾಗಿ ಸಂಸ್ಥೆಯೊಂದನ್ನು ಕಟ್ಟಿಕೊಂಡು, ಮನೆಯಲ್ಲಿಯೇ ಮಕ್ಕಳ ಸಾಹಿತ್ಯದ ಕುರಿತು, ಮಹಿಳೆಯರ ಕುರಿತು ಸದಾ ಕಾರ್ಯಕ್ರಮ ಮಾಡುತ್ತಿದ್ದರು. ಎಲ್ಲಿ ಹೋದರೂ ಪತ್ನಿಯೊಂದಿಗೆ ಭಾಗವಹಿಸುತ್ತಿದ್ದರು.

ಇಂದು ನಸಕಿನ ಜಾವದಲ್ಲಿ ಹೃದಯಘಾತದಿಂದ  ಧಾರವಾಡ  ತಾಲ್ಲೂಕಿನ  ಮರೇವಾಡ  ಗ್ರಾಮದ  ಅವರ ಮನೆಯಲ್ಲಿ ನಿಧನರಾಗಿದ್ದಾರೆ. ಇವರ ಅಗಲಿಕೆಯಿಂದ ಕನ್ನಡ ಮಕ್ಕಳ ಸಾಹಿತ್ಯಕ್ಕೆ ತುಂಬಲಾರದ ಹಾನಿಯಾಗಿದೆ. ಇವರ ಅಂತ್ಯಕ್ರಿಯೆ ಇಂದು ಮಧ್ಯಹ್ನ 12 ಗಂಟೆಗೆ ಮರೇವಾಡದಲ್ಲಿ ಜರಗುವದು.

ಫ್ರೆಶ್ ನ್ಯೂಸ್

Latest Posts

Featured Videos